ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಭಕ್ತರು; ವೈಕುಂಠ ಏಕಾದಶಿ ಪ್ರಯುಕ್ತ ನಾಗೇಂದ್ರನಮಟ್ಟಿಯಲ್ಲಿ 15 ಸಾವಿರ ಲಡ್ಡು ವಿತರಣೆ

Vaikunta Ekadashi
Vaikunta Ekadashi
Published on
ಹಾವೇರಿ: ಇಲ್ಲಿನ ನಾಗೇಂದ್ರನಮಟ್ಟಿ 8ನೇ ಕ್ರಾಸ್ ಗಣಜೂರ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಮಂಗಳವಾರ ವೈಕುಂಠ ಏಕಾದಶಿ ನಿಮಿತ್ತ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಪುನೀತರಾದರು.
ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ವೆಂಕಟೇಶ್ವರ ದೇವರಿಗೆ 16 ದ್ರವ್ಯಗಳಿಂದ ವಿಶೇಷ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು.ಪಾಲಕಿ ಉತ್ಸವ, ವೈಕುಂಠ ಮಹಾದ್ವಾರದಲ್ಲಿ ಶ್ರೀದೇವಿ, ಭೂದೇವಿ ಸಹಿತ ವೆಂಕಟೇಶ್ವರ ಸ್ವಾಮಿ ಚರಪ್ರತಿಷ್ಠಾಪನೆ ಮಾಡಲಾಗಿತ್ತು. ಮಹಿಳೆಯರಿಗೆ ದೇಗುದಿಂದ ಉಡಿ ತುಂಬಲಾಯಿತು.
15 ಸಾವಿರ ಭಕ್ತರಿಗೆ ತುಪ್ಪದಿಂದ ತಯಾರಿಸಿದ ಲಡ್ಡು ವಿತರಿಸಲಾಯಿತು. ಬೆಳಗ್ಗೆಯಿಂದ ರಾತ್ರಿ 10 ಗಂಟೆವರೆಗೆ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರನ ದರ್ಶನ ಪಡೆದರು. ಸ್ವರ್ಗದ ಬಾಗಿಲಿನಲ್ಲಿ ಬಂದು ಸಂತೃಪ್ತರಾದರು. ಸವಿತಾ ಸಮಾಜದ ಅಧ್ಯಕ್ಷ ಪ್ರಸಾದ ಕತ್ತೆಪಲ್ಲಿ, ಸದಸ್ಯರಾದ ಯಲ್ಲಪ್ಪ ಸೂಗೂರ, ಕೃಷ್ಣ ವೆಲ್ಕೂರ, ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net