ಒಂದೇ ದಿನ ಎರಡು ಪರೀಕ್ಷೆ ಬೇಡ; ಹಾವೇರಿ ವಿವಿ ಕುಲಪತಿಗೆ ವಿದ್ಯಾರ್ಥಿಗಳ ಮನವಿ

Haveri, University, VC, Exam, Students, Protest,
Haveri, University, VC, Exam, Students, Protest,
Published on
ಹಾವೇರಿ: ಹಾವೇರಿ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳ ಪರೀಕ್ಷೆ ವೇಳಾಪಟ್ಟಿಯಲ್ಲಿ ಒಂದೇ ದಿನ ಎರಡು ಪರೀಕ್ಷೆ ಹಮ್ಮಿಕೊಳ್ಳಲಾಗಿದ್ದು, ಇದು ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿದೆ. ಹಾಗಾಗಿ, ಒಂದೇ ದಿನ ಎರಡು ಪರೀಕ್ಷೆ ಬೇಡ ಎಂದು ವಿದ್ಯಾರ್ಥಿಗಳು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಅವರಿಗೆ ಒತ್ತಾಯಿಸಿದ್ದಾರೆ.
ಭಾರತ ವಿದ್ಯಾರ್ಥಿ ಫೆಡರೇಶನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ತಾಲೂಕಿನ ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಎದುರು ಪ್ರಾಂಶುಪಾಲರ ಮೂಲಕ ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಹಾವೇರಿ ವಿವಿ ವ್ಯಾಪ್ತಿಯಲ್ಲಿ ಬರುವ ಪದವಿ ವಿದ್ಯಾರ್ಥಿಗಳ ಪರೀಕ್ಷೆ ವೇಳಾಪಟ್ಟಿನ ಧಿಡೀರ್ ಆಗಿ ಪ್ರಕಟಿಸಲಾಗಿದೆ. ಶೈಕ್ಷಣಿಕ ವರ್ಷದ ವೇಳಾಪಟ್ಟಿ ಸರಿದೂಗಿಸುವ ಉದ್ದೇಶದಿಂದ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವುದು ಸರಿಯಲ್ಲ. ಒಂದೇ ದಿನದಲ್ಲಿ ಎರಡು ಪರೀಕ್ಷೆಗಳನ್ನು ನಡೆಸುವುದು ವಿದ್ಯಾರ್ಥಿಗಳ ಮಾನಸಿಕ ಒತ್ತಡ, ಹಿಂಸೆ ನೀಡಿದಂತೆ ಆಗುತ್ತದೆ. ಆದ್ದರಿಂದ ಕೂಡಲೇ ಈಗಾಗಲೇ ಬಿಡುಗಡೆ ಮಾಡಿದ ಪರೀಕ್ಷಾ ವೇಳಾ ಪಟ್ಟಿ ಹಿಂಪಡೆದು ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ವೇಳಾಪಟ್ಟಿ ಪರಿಷ್ಕರಣೆ ಮಾಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ವಿದ್ಯಾರ್ಥಿಗಳಾದ ಅರುಣ ನಾಗಾವತ, ಕಿರಣ ನಾಯ್ಕ, ದಿಳ್ಳೆಪ್ಪ ಗೋಣೆಪ್ಪನವರ, ಕಿರಣ ಪೂಜಾರ, ಸುನೀಲ ಎಲ್., ನಾಗರಾಜ ದೊಡ್ಡಮನಿ, ನಾಗರಾಜ ತಿಮ್ಮಣ್ಣನವರ, ಜ್ಯೋತಿ ಕೆ., ನರಸಮ್ಮ ಮ್ಯಗಳಕಟ್ಟಿ, ಪ್ರೇಮಕುಮಾರ ಲಮಾಣಿ, ಆಕಾಶ ನಾಯ್ಕ, ವಿನೋದ ಎಲ್, ಸಾಗರ ರಂಗಣ್ಣನವರ, ಪರಶುರಾಮ ಬಸಾಪುರ, ಪ್ರೀತಿ ಭದ್ರಾಪುರ, ಲಕ್ಷ್ಮೀ ಕೊಲ್ಲೂರು, ಪೂಜಾ ಮೇಲ್ಮುರಿ, ಪವಿತ್ರಾ ಕಂಚರಗಟ್ಟಿ, ಸೌಂದರ್ಯ ಎಲ್., ಪಲ್ಲವಿ ಗೆಜ್ಜಿಹಳ್ಳಿ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net