ಅಡುಗೆ ಅನಿಲದ ಬಿಕ್ಕಟ್ಟಿಗೆ ಸೌರ ಉಷ್ಣಶಕ್ತಿ ಪರಿಹಾರ; ಹಾವೇರಿ ವಿವಿ ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ

cylinder problem, sollutions,
cylinder problem, sollutions,
Published on
ಹಾವೇರಿ: ಯುದ್ದದ ಸಂಕಷ್ಟದ ಕಾಲದಲ್ಲಿ ಭಾರತವು ತನ್ನ ಶೇ.90ರಷ್ಟು ಎಲ್.ಪಿ.ಜಿ ಅಡುಗೆ ಅನಿಲವನ್ನು ತನ್ನ ಅಗತ್ಯಕ್ಕಾಗಿ ಆಮದಿನ ಮೇಲೆ ಅವಲಂಬಿತವಾಗಿದೆ. ಪ್ರಸ್ತುತ ಎದುರಾಗಿರುವ ಇಂಧನ ಬಿಕ್ಕಟ್ಟಿನ ಸಂದರ್ಭದಲ್ಲಿ ಸೌರ ಒಲೆಗಳು ಅತ್ಯಂತ ಉಪಯುಕ್ತವಾಗಬಲ್ಲವು ಎಂದು ಐಐಟಿ ಕರಗಪೂರ ಹಳೆಯ ವಿದ್ಯಾರ್ಥಿಯೂ ಆಗಿರುವ ಹಾವೇರಿ ವಿವಿ ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಡಿಸಿ ಕಚೇರಿ ರಸ್ತೆಯ ಶ್ರೀ ಗಂಗಾಧರ ನಂದಿ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಅರಳಿಕಟ್ಟಿ ಪ್ರಕಾಶನದಿಂದ ಆಯೋಜಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಗುರುಶಾಂತಪ್ಪ ಜಾಬಿನ್ ಅವರ ಜನ್ಮಶತಮಾನೋತ್ಸವ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರು ಮೂರು ಸಾವಿರ ಗಂಟೆಗಳ ಕಾಲ ಸುರಿಯುವ ಸೂರ್ಯನ ಬೆಳಕು ಮಾತ್ರ ಇಂಧನ ಸ್ವಾತಂತ್ರ್ಯ ನೀಡಬಲ್ಲದು. ಗ್ರಾಮೀಣ ಭಾರತಕ್ಕೆ ಸೌರಉಷ್ಣ ಸಾಧನಗಳು ಕೇವಲ ಪರ್ಯಾಯತ ಮಾತ್ರವಲ್ಲ, ಆರ್ಥಿಕ ಅನಿವಾರ್ಯತೆಯೂ ಆಗಿದೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಸೌರ ಒಲೆಗಳು ಸಾಧನಗಳಾಗಿವೆ. ಪರಿಸರ ಸ್ನೇಹಿ ಮತ್ತು ಆರ್ಥಿಕ ಲಾಭದಾಯಕವಾಗಿದ್ದು, ಸೂರ್ಯ ಶಾಖವನ್ನು ಬಳಸಿಕೊಳ್ಳುವ ಕಲೆ ನಾವೆಲ್ಲ ಬೆಳಸಿಕೊಳ್ಳಬೇಕು. ಪಳೆಯುಳಿಕೆ ಇಂಧನಗಳ ಮೂಲವಾಗಿ ಬಳಸಿಕೊಳ್ಳಬೇಕು. ಇಂಗಾಲದ ಹೊರಸೂಸುವಿಕೆಯನ್ನೂ ಕಡಿಮೆ ಮಾಡಬಹುದು. ಅನೇಕ ಶಾಲೆಗಳಲ್ಲಿ ಬಿಸಿಯೂಟ ಮತ್ತು ಮಠ, ಮಂದಿರಗಳ ಸಮುದಾಯ ಅಡುಗೆ ಮಂದಿರಗಳಲ್ಲಿ ಈ ಸೌರ ಉಷ್ಣ ವ್ಯವಸ್ಥೆ ಯಶಸ್ವಿಯಾಗಿದೆ.
ಇದಕ್ಕಾಗಿ ಬಾಕ್ಸ್ ಮಾದರಿಯ ಸೌರ ಒಲೆ ಅತ್ಯಂತ ಸರಳ ಮತ್ತು ನಂಬಿಗಸ್ಥ ಸಾಧನ. ಇದು ಅಕ್ಕಿ, ಬೇಳೆ ಮತ್ತು ತರಕಾರಿಗಳನ್ನು ನಿಧಾನವಾಗಿ ಬೇಯಿಸಲು ಸೂಕ್ತವಾಗಿದೆ. ಈ ವಿಧಾನದಲ್ಲಿ ಆಹಾರದ ಪೌಷ್ಠಿಕಾಂಶಗಳು ಶೇ.100ರಷ್ಟು ಸಂರಕ್ಷಿಸಲ್ಪಡುತ್ತವೆ. ಪ್ಯಾರಾ ಬೋಲಿಕ್ ಡಿಶ್‌ಕುಕ್ಕರ್, ಮನೆಯೊಳಗಿನ ಸೌರ ಅಡುಗೆ ವ್ಯವಸ್ಥೆ ಬಳಸಿಕೊಳ್ಳಬಹುದಾಗಿದೆ ಎಂದು ಜಂಗಮಶೆಟ್ಟಿ ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net