ಹಾವೇರಿ ವಿವಿಯಲ್ಲಿ ವಿದ್ಯಾರ್ಥಿ ದಿನಾಚರಣೆ; ಎಬಿವಿಪಿಯಿಂದ ವಿವಿಧ ಬಗೆಯ ಸಸಿ ನೆಟ್ಟು ಸಂಭ್ರಮ

Haveri, University, ABVP, Students, Day,
Haveri, University, ABVP, Students, Day,
Published on
ಹಾವೇರಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾವೇರಿ ವಿಶ್ವವಿದ್ಯಾಲಯದ ಶಾಖೆ ವತಿಯಿಂದ ಕೆರಿಮತ್ತಿಹಳ್ಳಿಯ ಹಾವೇರಿ ವಿವಿ ಕ್ಯಾಂಪಸ್‌ನಲ್ಲಿ ಗುರುವಾರ ರಾಷ್ಟ್ರೀಯ ವಿದ್ಯಾರ್ಥಿ ದಿವಸ ಹಾಗೂ ಎಬಿವಿಪಿ ಸಂಸ್ಥಾಪನಾ ದಿನ ಆಚರಿಸಲಾಯಿತು.
ವಿಶ್ವವಿದ್ಯಾಲಯದ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿ ವಸತಿ ನಿಲಯದ ಮುಂಭಾಗದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಟ್ಟು ನೀರುಣಿಸಲಾಯಿತು. ಹಾವೇರಿ ನಗರ ಕಾರ್ಯದರ್ಶಿ ಸಾಗರ ಪೊಲೀಸಗೌಡ್ರು ಪರಿಸರ ಬಗ್ಗೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಮಾತನಾಡಿದರು.
ಹಿಂದುಳಿದ ವರ್ಗದ ತಾಲೂಕು ಅಧಿಕಾರಿ ಶಾಂತಪ್ಪ ದೊಡ್ಡಮನಿ ಹಾಗೂ ವಿಶ್ವವಿದ್ಯಾಲಯದ ಕಾಲೇಜ್ ಡೆವಲಪ್‌ಮೆಂಟ್ ಕಮಿಟಿ ಸದಸ್ಯ ರಾಘವೇಂದ್ರ ಪತ್ತೇಪುರ, ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಅಭಿಷೇಕ ದೊಡ್ಡಮನಿ, ಉಪನ್ಯಾಸಕರಾದ ಪ್ರೊ.ಮನೋಹರ ಕೋಳಿ, ಡಾ.ರವೀಂದ್ರ ಬಣಕಾರ, ಕಿರಣಕುಮಾರ ಕೋಣನವರ, ಕಾರ್ತಿಕ ಕಲಾಲ, ಯಶವಂತ, ಈಶ್ವರಿ ಬಡಿಗೇರ, ಕವಿತಾ ಹಡಪದ, ಭೂಮಿಕಾ ವಧುನಿ, ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net