ಬೇಸಿಗೆ ಆರಂಭದಲ್ಲೇ ಮಳೆ ಆಗಮನ

 summer, rain
summer, rain
Published on
ಹಾವೇರಿ: ಶಿವರಾತ್ರಿ ಬಳಿಕ ಬೇಸಿಗೆಯ ದಗೆ ಹೆಚ್ಚಾಗಿದ್ದು, ಈ ನಡುವೆ ಬೇಸಿಗೆ ಆರಂಭದಲ್ಲೇ ಜಿಲ್ಲೆಯ ಕೆಲವೆಡೆ ಮಂಗಳವಾರ, ಬುಧವಾರ ಎರಡು ದಿನ ಮಳೆ ಸುರಿಯುವ ಮೂಲಕ ಕಾದ ಹಂಚಿನಂತಾಗಿದ್ದ ಭೂಮಿಗೆ ತಂಪೆರೆದಿದೆ.
ಈ ಸಲ ಬೇಸಿಗೆಯಲ್ಲಿ ಶೇ.2ರಿಂದ 3ರಷ್ಟು ಉಷ್ಣಾಂಶ ಹೆಚ್ಚಳವಾಗುವ ಆತಂಕ ವ್ಯಕ್ತವಾಗಿದೆ. ಹೀಗಾಗಿ ಜನ ಬೇಸಿಗೆ ಕಳೆಯಲು ಸಿದ್ಧತೆ ಆರಂಭಿಸಿದ್ದಾರೆ. ಎಸಿ, ಕೂಲರ್, ಫ್ಯಾನ್ ಖರೀದಿಗೆ ಮುಂದಾಗಿದ್ದಾರೆ. ಹಣ್ಣು, ಮಜ್ಜಿಗೆ, ಎಳನೀರು ವ್ಯಾಪಾರ ಜೋರಾಗಿದೆ.
ಈ ಮಧ್ಯೆ ಬುಧವಾರವೂ ಸಂಜೆ ಹಾವೇರಿ ಜಿಲ್ಲಾ ಕೇಂದ್ರ ಸೇರಿದಂತೆ ವಿವಿಧೆಡೆ ಮಳೆ ಸುರಿದಿದೆ. ಸಂಜೆ 4 ಗಂಟೆ ಹೊತ್ತಿಗೆ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿತ್ತು. ರಭಸವಾದ ಗಾಳಿ ಬೀಸತೊಡಗಿತು. ನಂತರ ಕೆಲಕಾಲ ಮಳೆ ಸುರಿಯಿತು. ಶಾಲಾ, ಕಾಲೇಜ್‌ಗಳಿಮದ ಮನೆಗೆ ಹೊರಟಿದ್ದ ಮಕ್ಕಳು ಅಕ್ಕಪಕ್ಕದ ಅಂಗಡಿಗಳಲ್ಲಿ ನಿಂತು ಮಳೆ ಬಿಟ್ಟ ನಂತರ ತೆರಳಿದರು. ಕೆಲವರು ಛತ್ರಿಗಳನ್ನು ಹೊರಗೆ ತೆಗೆದು ರಸ್ತೆಪಕ್ಕದಲ್ಲಿ ಸಂಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net