ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 7 ಸಾವಿರ ಹೆಕ್ಟೇರ್ ಕಬ್ಬು ಬೆಳೆಯಲಾಗಿದೆ. ಪ್ರತಿ ವರ್ಷ ಅಂದಾಜು 15 ಲಕ್ಷ ಟನ್ ಕಬ್ಬು ಬೆಳೆಯಲಾಗುತ್ತದೆ. ರಿಕವರಿ ಆಧಾರದಲ್ಲಿ ಕಬ್ಬಿನ ದರ ನಿಗದಿಯಾಗುತ್ತದೆ. ರಿಕವರಿ ಪ್ರಮಾಣ ಶೇ.11ಕ್ಕಿಂತ ಹೆಚ್ಚಿದ್ದರೆ ಪ್ರತಿ ಟನ್ ಕಬ್ಬಿಗೆ 3,300 ರೂ. ಮತ್ತು ಶೇ.10.78 ಇದ್ದರೆ ಪ್ರತಿ ಟನ್‌ಗೆ 3,200 ರೂ. ದೊರೆಯುತ್ತದೆ. ಕಳೆದ ವಾರದ ಕಬ್ಬು ಬೆಳೆಗಾರರ ಹೋರಾಟದಿಂದಾಗಿ ಜಿಲ್ಲೆಯಲ್ಲಿ ಪ್ರಸ್ತುತ 2,850 ಹಾಗೂ 2,750 ರೂ. ರೂ. ಪ್ರತಿ ಟನ್ ಕಬ್ಬಿ ಬೆಲೆ ನಿಗದಿಪಡಿಸಲಾಗಿದೆ.