ಜಿಲ್ಲೆಯ ವಿವಿಧೆಡೆ ಬೀದಿನಾಯಿ ದಾಳಿ; ಹತ್ತಕ್ಕೂ ಅಧಿಕ ಮಕ್ಕಳು, ವೃದ್ದರಿಗೆ ಗಾಯ

Haveri, Street Dogs, Byte, Hospitalised,
Haveri, Street Dogs, Byte, Hospitalised,
Published on
ಹಾವೇರಿ: ಹಾವೇರಿ ಶಹರ, ದೇವಗಿರಿ, ಗುತ್ತಲ, ಬ್ಯಾಡಗಿ ತಾಲೂಕಿನ ಹಿರೇಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಒಂದೇ ದಿನ ಹತ್ತಕ್ಕೂ ಅಧಿಕ ಜನರಿಗೆ ನಾಯಿ ದಾಳಿ ಮಾಡಿ ಗಾಯಗೊಳಿಸಿದ ವರದಿಯಾಗಿದೆ.
ಬ್ಯಾಡಗಿ ತಾಲೂಕಿನ ಹಿರೇಹಳ್ಳಿ ಗ್ರಾಮದ ಬಾಲಕನಿಗೆ ಹಲವೆಡೆ ಕಚ್ಚಿ ಗಾಯಗೊಳಿಸಿವೆ. ಉಳಿದಂತೆ ಹಾವೇರಿ, ಗುತ್ತಲ, ದೇವಗಿರಿ ಗ್ರಾಮದಲ್ಲಿ ಮಕ್ಕಳು, ವೃದ್ದರು ಸೇರಿ ಹಲವರಿಗೆ ನಾಯಿಗಳು ಕಚ್ಚಿವೆ. ದಾಳಿ ಮಾಡಿರುವ ನಾಯಿಗಳಿಗೆ ರೇಬೀಸ್ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರೇಬೀಸ್ ಇಂಜೆಕ್ಷನ್ ಸೇರಿದಂತೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರ ಸ್ಥಿತಿ ಸುಧಾರಿಸುತ್ತಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ ತಿಳಿಸಿದ್ದಾರೆ. ಉಳಿದವರು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಾವೇರಿ, ಬ್ಯಾಡಗಿ, ರಾಣೆಬೆನ್ನೂರ ಸೇರಿದಂತೆ ವಿವಿಧೆಡೆ ಬೀದಿನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ಸ್ಥಳೀಯ ಆಡಳಿತಗಳ ವತಿಯಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಂತಾನಹರಣ ಚಿಕಿತ್ಸೆ ಮಾಡಲಾಗುತ್ತಿದೆ. ಆದರೆ, ಇದು ಯಶಸ್ವಿಯಾಗುತ್ತಿಲ್ಲ. ಎಲ್ಲ ನಾಯಿಗಳಿಗೆ ಚಿಕತ್ಸೆ ನೀಡುತ್ತಿಲ್ಲ ಎಂಬ ಆರೋಪಗಳಿವೆ. ಇದರ ಜತೆಗೆ ಬಿಸಿಲ ಬೇಗೆಗೆ ನರಳುವ ನಾಯಿಗಳು ಅಸ್ವಸ್ಥಗೊಂಡು ವ್ಯಾಘ್ರ ರೂಪಕ್ಕೆ ತಾಳಿ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಸಾಧ್ಯತೆ ಇದೆ. ಈ ಕುರಿತು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net