ನಗರದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳ್ಳತನ ನಡೆಸಿದ ಆರೋಪಿತರಾದ ಬ್ಯಾಡಗಿ ತಾಲೂಕು ಶಿಡೇನೂರ ಗ್ರಾಮದ ಮಲ್ಲೇಶಪ್ಪ ವೆಂಕಪ್ಪ ನಾಯ್ಕ, ಬಾಗಲಕೋಟೆ ಬದಾಮಿ ತಾಲೂಕು ಕೆರೂರ ಗ್ರಾಮದ ಕಾಂತೇಶ ಮುತ್ತಪ್ಪ ವಡ್ಡರ, ಬೆಳಗಾವಿ ಜಿಲ್ಲೆ ಬೈಲಹೊಂಗಲ ಬೆಳವಡಿಯ ಅಜೇಯ ಹನುಮಂತ ಸಾಲಹಳ್ಳಿ, ನಾಗರಾಜ ಹನುಮಂತ ವಡ್ಡರ ಹಾಗೂ ಸಹಕರಿಸಿದ ಆರೋಪಿ ಡಿಆರ್ ಪೊಲೀಸ್ ಕಾನ್‌ಸ್ಟೆಬಲ್, ಹಿರೇಕೆರೂರ ತಾಲೂಕು ಮುದ್ದಿನಕೊಪ್ಪ ನಿವಾಸಿ ಪ್ರದೀಪ ಹನುಮಂತಪ್ಪ ನಾಯ್ಕ (37)ನನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.