ಹಾವೇರಿ ಎಸ್ ಪಿ ಯಶೋಧಾ, ಪಿಸಿ ಆನಂದಗೆ ಡಿಜಿ, ಐಜಿ ಪದಕ

Haveri, Sp, Yashodha Vantagodi, got medal,
Haveri, Sp, Yashodha Vantagodi, got medal,
Published on
ಹಾವೇರಿ: 2026ನೇ ಸಾಲಿನ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಪ್ರಶಂಸಾ ಪದಕ ಪ್ರಶಸ್ತಿಗೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಹಾಗೂ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಆನಂದ ಫ. ದೊಡ್ಡಕುರುಬರ ಆಯ್ಕೆಯಾಗಿದ್ದಾರೆ.
ಎಸ್ ಪಿ ಯಶೋಧಾ ವಂಟಗೋಡಿ ಉತ್ತಮ ಆಡಳಿತಕ್ಕಾಗಿ ಹಾಗೂ ಜಿಲ್ಲೆಯ ವಿವಿಧ ಅಪರಾಧ ಪ್ರಕರಣಗಳ ಪತ್ತೆ ಮಾಡುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಆನಂದ ದೊಡ್ಡಕುರುಬರ ಸೈಬರ್ ಪ್ರಕರಣಗಳ ಪತ್ತೆ ಹಾಗೂ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸುವ ಸೇವೆ ಪರಿಗಣಿಸಿ ಸರ್ಕಾರ ಪದಕಕ್ಕೆ ಆಯ್ಕೆ ಮಾಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net