

ಗಾಂಜಾ ಪ್ರಕರಣಗಳ ಕುರಿತು ಜಿಲ್ಲೆಯಾದ್ಯಂತ ವಿಶೇಷ ನಿಗಾ ವಹಿಸಲಾಗಿದ್ದು, ಮಾಹಿತಿ ತಿಳಿದ ಕೂಡಲೇ ನಮ್ಮ ಅಧಿಕಾರಿಗಳು, ಸಿಬ್ಬಂದಿ ದಾಳಿ ನಡೆಸುತ್ತಿದ್ದಾರೆ. ಗಾಂಜಾ ಹೊರತುಪಡಿಸಿ ಬೇರೆ ಡ್ರಗ್ಸ್ ಬಳಕೆ ಕಂಡುಬಂದಿಲ್ಲ. ಇದರ ಪರಿಣಾಮವಾಗಿ ಹಲವರನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ. ಸಾರ್ವಜನಿಕರೂ ಗಾಂಜಾ ಕೇಸ್‌ಗಳ ಬಗ್ಗೆ ಮಾಹಿತಿ ಇದ್ದರೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.