ಹಾವೇರಿ ತಾಲೂಕಿನ ನೆಲೋಗಲ್ಲ ಗ್ರಾಮದ ವಿನಾಯಕ ಆನ್ವೇರಿ ಎ1 ಆರೋಪಿಯಾಗಿದ್ದು ಈತನೇ ವ್ಯವಹಾರದ ಕಿಂಗ್‌ಪಿನ್ ಎನ್ನಲಾಗಿದೆ. ಈತನ ಜತೆ ತುಮಕೂರಿನ ರಮ್ಯಾ ಜಿ., ನೆಲೋಗಲ್ಲನ ವೀರೇಶ ಕರಬಸಪ್ಪ ಆನ್ವೇರಿ, ರಮ್ಯಾ ವೀರೇಶ ಆನ್ವೇರಿ, ಜಯಶ್ರೀ ಕರಬಸವ್ವ ಆನ್ವೇರಿ, ಮಂಜುನಾಥ ಆನ್ವೇರಿ, ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿತರು ನಾಪತ್ತೆಯಗಿದ್ದು, ಇವರ ಪತ್ತೆಗೆ ಖಾಕಿಪಡೆ ಬಲೆ ಬೀಸಿದೆ. ಬಾಕ್ಸ್ ಯಾವುದೇ ಅನುಮತಿ ಪಡೆದಿಲ್ಲ ಸರ್ಕಾರದಿಂದ ಯಾವುದೇ ಅಧಿಕೃತ ಅನುಮತಿ ಪಡೆಯದೇ ಆರೋಪಿತರು ಜನರಿಗೆ ವಂಚಿಸುವ ಉದ್ದೇಶದಿಂದ ಹಾವೇರಿಯ ಅಶ್ವಿನಿನಗರ 1ನೇ ಕ್ರಾಸ್‌ನಲ್ಲಿ ‘ಎಸ್‌ಎಲ್‌ವಿ ಮಹಿಳಾ ಮಾರ್ಟ್ ಆ್ಯಂಡ್ ಮಾರ್ಕೆಟಿಂಗ್’ ಹೆಸರಲ್ಲಿ ಕಚೇರಿ ತೆರೆದಿದ್ದರು. ಸೆಪ್ಟೆಂಬರ್ 1, 2025ರಿಂದ ಜೂನ್ 3, 2026ರ ಅವಧಿಯಲ್ಲಿ ಕಾನೂನು ಬಾಹಿರವಾಗಿ 1 ಲಕ್ಷ ಡೆಪಾಸಿಟ್ ಇಟ್ಟರೆ ತಿಂಗಳಿಗೆ 20ರಿಂದ 28 ಸಾವಿರ ರೂ. ಕೊಡುತ್ತೇವೆ ಎಂದು ನಂಬಿಸಿ 477 ಜನರಿಂದ 6,49,45,000 ರೂ. ಪಡೆದು ವಂಚಿಸಿದ್ದಾರೆ. ಜಿಲ್ಲೆ ಮಾತ್ರವಲ್ಲದೇ ಹೊರಜಿಲ್ಲೆಗಳ ಜನರಿಗೂ ವಂಚಿಸಿದ್ದಾರೆ. ಕಾನೂನು ಬಾಹಿರವಾಗಿ ವ್ಯವಹಾರ ನಡೆಸಿದ್ದಲ್ಲದೇ, ಮಹತ್ವದ ಮಾಹಿತಿಗಳು ಹಾಗೂ ಸಾಕ್ಷಾಧಾರಗಳು ಸಿಗದಂತೆ ಆಫೀಸಿನಲ್ಲಿದ್ದ ಎಲ್ಲ ವಸ್ತುಗಳೂ ಹಾಗೂ ದಾಖಲೆಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಅಶ್ವಿನಿನಗರದ ನಿವಾಸಿ ನವ್ಯಾ ಮಂಜುನಾಥ ಅರಳಿಕಟ್ಟಿ ಹಾಗೂ ವಂಚನೆಗೀಡಾದವರು ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೆಪಿಐಡಿ ಕಾಯ್ದೆ 2004, ಬಡ್ಸ್ ಕಾಯ್ದೆ 2019 ಹಾಗೂ ಬಿಎನ್‌ಎಸ್ 2023ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಾಕ್ಸ್ ಕಚೇರಿ ಮೇಲೆ ನೋಟಿಸ್ ಅಂಟಿಸಿ ಪರಾರಿ ಆಡಿಟ್ ಕಾರ್ಯ ಪೂರ್ಣಗೊಳ್ಳದ ಕಾರಣ ಏಪ್ರಿಲ್ ತಿಂಗಳ ಹಣ ಖಾತೆಗೆ ವರ್ಗಾವಣೆ ಮಾಡಲು ತಡವಾಗಿದೆ. ಆಡಿಟ್ ತಡ ಆಗಿದ್ದರಿಂದ ಎಸ್‌ಎಲ್‌ವಿ ಮಹಿಳಾ ಮಾರ್ಟ್‌ನ ಖಾತೆಗಳು ಫ್ರೀಜ್ ಆಗಿವೆ. ಕಾರಣ ಹಣ ವರ್ಗಾವಣೆ ಮಾಡಲು ಆಗುತ್ತಿಲ್ಲ. ಜೂನ್ 10ರ ನಂತರ ವರ್ಗಾಯಿಸಲಾಗುವುದು ಎಂದು ಕಂಪನಿ ಮುಖ್ಯಸ್ಥ ರಾಜೇಶ ಬೊಮ್ಮಲು (ಎಂಡಿ) ಗೂಗಲ್ ಮೀಟ್ ಮೂಲಕ ತಿಳಿಸಿದ್ದಾರೆ. ಹಾಗಾಗಿ, ಜೂನ್ 10ರವರಗೆ ಕಚೇರಿ ಬಂದ್ ಮಾಡಲಾಗುವುದು. ನಂತರ ಹಣ ಕೊಡಲಾಗುವುದು. ಗ್ರಾಹಕರು ಸಹಕರಿಸಬೇಕು ಎಂದು ಕಚೇರಿ ಮೇಲೆ ನೋಟಿಸ್ ಅಂಟಿಸಿ ಪರಾರಿಯಾಗಿದ್ದಾರೆ.