ಹಾವೇರಿ: ಹುಬ್ಬಳ್ಳಿಯ ಇಂದಿರಾ ಗಾಂಧಿ ಗಾಜಿನ ಮನೆ ಉದ್ಯಾನವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಧಾರವಾಡ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಹಾಗೂ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ 5ನೇ ಜಿಲ್ಲಾ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಹಾವೇರಿ ನಗರದ ಐವರು ಸ್ಕೇಟಿಂಗ್ ಪಟುಗಳು ವಿಜೇತರಾದರು.
ಹಾವೇರಿ ಜಿಲ್ಲೆಯಿಂದ ಎಂಟು ಸ್ಕೇಟಿಂಗ್ ಪಟುಗಳು ಭಾಗವಹಿಸಿದ್ದರು. ಅದರಲ್ಲಿ ಐವರು ಚಾಂಪಿಯನ್‌ಷಿಪ್ ಪಡೆದರು. ಹಾವೇರಿಯಲ್ಲಿ ಸ್ಕೇಟಿಂಗ್ ಮೈದಾನ ದುರಸ್ತಿಗೆ ಒಳಗಾಗಿದ್ದು, ಬಾಸ್ಕೆಟ್ ಬಾಲ್ ಮೈದಾನದಲ್ಲಿ ಮಕ್ಕಳು ಸ್ಕೇಟಿಂಗ್ ತರಬೇತಿ ಪಡೆದು ಹುಬ್ಬಳ್ಳಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಸ್ಕೇಟಿಂಗ್ ಮೈದಾನ ನಿರ್ಮಾಣವಾದರೆ ಮತ್ತಷ್ಟು ಸಾಧನೆ ಮಾಡುತ್ತಾರೆ ಎಂದು ತರಬೇತುದಾರ ಗಣೇಶ ರಾಯ್ಕರ ತಿಳಿಸಿದರು.
ವಿಜೇತರ ಪಟ್ಟಿ
10ರಿಂದ 12 ವಯಸ್ಸಿನ ಎಸ್.ವಿ.ಪ್ರಕುಲ್ ಪ್ರಥಮ ಸ್ಥಾನ, 12ರಿಂದ 15 ವಯಸ್ಸಿನ ವೈಷ್ಣವಿ ಆರ್. ಪ್ರಥಮ ಸ್ಥಾನ, ಅಪೂರ್ವ ಬೂದಗಟ್ಟಿ ದ್ವಿತೀಯ ಸ್ಥಾನ, 15ರಿಂದ 18 ವಯಸ್ಸಿನ ಅಖಿಲ್ ಅಲ್ಲಾಪುರ ದ್ವಿತೀಯ ಸ್ಥಾನ, 19 ವಯಸ್ಸಿನ ಮೇಲ್ಪಟ್ಟ ಸ್ಪರ್ಧೆಯಲ್ಲಿ ಆಸಿಮ್ ಅಲ್ಲಾಪುರ ಪ್ರಥಮ ಸ್ಥಾನ ಪಡೆದಿದ್ದಾರೆ.