ಎಸ್.ಐ.ಆರ್. 12.15 ಲಕ್ಷ ಗಣಕೀಕರಣ; ಸೇರ್ಪಡೆ, ತಿದ್ದುಪಡೆಇಗೆ ಅವಕಾಶವಿದೆ; ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾಹಿತಿ

Haveri, SIR, DC, Meeting,
Haveri, SIR, DC, Meeting,
Published on
ಹಾವೇರಿ: ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಜಿಲ್ಲೆಯಲ್ಲಿ ಅತ್ಯಂತ ಚುರುಕಾಗಿ ನಡೆಯುತ್ತಿದೆ. ಈವರೆಗೆ 12,15,739 ಮತದಾರರ ಮಾಹಿತಿ ಗಣಕೀಕರಣ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶೇ.100ರಷ್ಟು ಎನುಮರೇಷನ್ ನಮೂನೆ ವಿತರಣೆ ಮಾಡಲಾಗಿದೆ. ಆಗಸ್ಟ್ 8ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಸೇರ್ಪಡೆ, ತಿದ್ದುಪಡಿ, ಸ್ಥಳಾಂತರಕ್ಕೆ ಅವಕಾಶವಿರುತ್ತದೆ. ಹಾಗಾಗಿ, ಸಾರ್ವಜನಿಕರು ಯಾವುದೇ ಆಂತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದರು.
ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ಕಾರ್ಯನಿರ್ವಹಿಸಲಾಗುತ್ತಿದೆ. ಎನುಮರೇಷನ್ ನಮೂನೆಯಲ್ಲಿ ಕುಟುಂಬಸ್ಥರ ಸಹಿ, ಭಾವಚಿತ್ರ ಹಾಗೂ ಮ್ಯಾಪಿಂಗ್ ನೋಡಲಾಗುತ್ತದೆ. ಎಸ್‌ಐಆರ್ ಕಾರ್ಯಕ್ಕೆ ರಾಜಕೀಯ ಪಕ್ಷಗಳ ಮುಖಂಡರ ಸಹಕಾರ ಬಹಳ ಮುಖ್ಯವಾಗಿದೆ ಎಂದರು.
ಜಿಲ್ಲೆಯಲ್ಲಿ 13,35,342 ಎನುಮರೇಷನ್ ನಮೂನೆಗಳನ್ನು ವಿತರಿಸಲಾಗಿದೆ. ಈ ಪೈಕಿ 12,15,739 ಗಣಕೀಕರಣ ಮಾಡುವ ಮೂಲಕ ಶೇ.91.04ರಷ್ಟು ಸಾಧನೆ ಮಾಡಲಾಗಿದೆ. ಹಾನಗಲ್ಲ ಕ್ಷೇತ್ರದಲ್ಲಿ 2,01,904 (ಶೇ.92.38), ಶಿಗ್ಗಾಂವ ಕ್ಷೇತ್ರದಲ್ಲಿ 2,18,430 (ಶೇ.91.15), ಹಾವೇರಿ ಕ್ಷೇತ್ರದಲ್ಲಿ 2,12,337(ಶೇ.88.84), ಬ್ಯಾಡಗಿ ಕ್ಷೇತ್ರದಲ್ಲಿ 1,96,695(ಶೇ.91.54), ಹಿರೇಕೆರೂರು ಕ್ಷೇತ್ರದಲ್ಲಿ 1,75,129(ಶೇ.93.46) ಹಾಗೂ ರಾಣೇಬೆನ್ನೂರು ಕ್ಷೇತ್ರದಲ್ಲಿ 2,11,244(ಶೇ.89.56)ರಷ್ಟು ಗಣಕೀಕರಣ ಮಾಡಲಾಗಿದೆ ಎಂದರು.
ಈವರೆಗೆ 31,633 ಮರಣ, 3,871 ಸಂಗ್ರಹವಾಗದ/ ಗೈರು, 54,765 ಶಾಶ್ವತ ವಲಸೆ, 16,506 ದ್ವಿಪ್ರತಿ ಹಾಗೂ ಇತರೆ 408 ಸೇರಿ 1,07,183 ಮತದಾರರನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್., ಚುನಾವಣಾ ತಹಸೀಲ್ದಾರ್ ಅಮೃತಗೌಡ ಪಾಟೀಲ, ರಾಜಕೀಯ ಪಕ್ಷದ ಮುಖಂಡರಾದ ವಿರುಪಾಕ್ಷಪ್ಪ ಬಳ್ಳಾರಿ, ಎಂ.ಎಂ.ಮೈದೂರ, ಮಂಜುನಾಥ ಗೌಡಶಿವಣ್ಣನವರ, ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net