ಆರೋಗ್ಯಯುತ ಬದುಕಿಗೆ ಪರಿಸರ ಅಗತ್ಯ; ಶಶಿರೇಖಾ ಮುಂಜೋಜಿ ಹೇಳಿಕೆ
Haveri, Shivaji Mahila Sangha, parisara Divas,
Published on:
Copied
Follow Us
ಹಾವೇರಿ: ಉತ್ತಮ ಹಾಗೂ ಆರೋಗ್ಯಯುತ ಬದುಕಿಗೆ ಸಮತೋಲಿತ ಪರಿಸರ ಅವಶ್ಯಕವಾಗಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಶ್ರೀ ಛತ್ರಪತಿ ಶಿವಾಜಿ ಮಹಿಳಾ ಸ್ವ-ಸಹಾಯ ಸಂಘದ ಅಧ್ಯಕ್ಷೆ ಶಶಿರೇಖಾ ರಮೇಶ ಮುಂಜೋಜಿ ಹೇಳಿದರು.
ನಗರದ ಸಂಜನಾ ಮೋರೆ ನಿವಾಸದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಿಳಾ ಸ್ವಸಹಾಯ ಸಂಘದಿಂದ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚಾರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿ ಮನುಷ್ಯನ ಬದುಕು ಒತ್ತಡದಿಂದ ಕೂಡಿದೆ. ಭೂಮಿಯ ಮೇಲೆ ಪರಿಸರ ಸಮತೋಲನೆ ಕಾಪಾಡಲು ನಾವೆಲ್ಲರೂ ಬದ್ಧರಾಗಬೇಕಿದೆ. ಪ್ರತಿಯೊಬ್ಬರೂ ಪರಿಸರ ಕಾಳಜಿಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಗಿಡ, ಮರಗಳನ್ನು ಬೆಳೆಸುವ ಪ್ರಯತ್ನ ಮಾಡೋಣ. ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸೋಣ ಎಂದು ಕರೆ ನೀಡಿದರು.
ಸಂಘದ ಕಾರ್ಯದರ್ಶಿ ಅನಿತಾ ಜಾಧವ, ಪದಾಧಿಕಾರಿಗಳಾದ ಪ್ರಭಾವತಿ ಗುಂಡೆ, ಸಂಜನಾ ಮೋರೆ, ಸುನಿತಾ ಮೋರೆ, ಸುಧಾಬಾಯಿ ತಿಳವಳ್ಳಿ, ಯಲ್ಲಮ್ಮ ತಿಳವಳ್ಳಿ, ಕೀರ್ತಿ ತಿಳವಳ್ಳಿ, ಸುಧಾ ಕಲಾಟೆ, ರೇಣುಕಾ ಸಾವಂತ, ರೀತಲ್ ಬೋಸ್ಲೆ, ಇತರರಿದ್ದರು.