ಗಾಳಿಗೆ ಹಾರಿದ ಅಲೆಮಾರಿ ಗುಡಿಸಲು ಹೊದಿಕೆ !

alemari, gudisalu, rain,
alemari, gudisalu, rain,
Published on
ಹಾವೇರಿ: ಬುಧವಾರ ಮಳೆಗಾಳಿಗೆ ಇಲ್ಲಿನ ಇಜಾರಿ ಲಕಮಾಪುರ ಹಾಗೂ ಶಾಂತಿ ನಗರದ ಐದಾರು ಗುಡಿಸಲುಗಳಿಗೆ ಹೊದಿಸಿದ್ದ ಪ್ಲಾಸ್ಟಿಕ್ ತಾಡಪತ್ರಿ ಹಾರಿ ಹೋಗಿವೆ.
ಬೇಸಿಗೆ ಆರಂಭದ ಮಳೆಯಲ್ಲೇ ಅಲೆಮಾರಿಗಳ ಗುಡಿಸಲುಗಳು ಹಾರಿ ಹೋಗುತ್ತಿವೆ. ಹಲವು ವರ್ಷ ಕಳೆದರೂ ಶಾಶ್ವತ ಸೂರು ಕಲ್ಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷೃ ತೋರುತ್ತಿದ್ದಾರೆ. ಗುಡಿಸಲಲ್ಲೇ ಕಾಲ ಕಳೆಯುವಂತಾಗಿದೆ. ಗುಡಿಸಲಿಗೆ ಅಳವಡಿಸಿದ್ದ ತಾಡಪತ್ರಿಗಳು ಗಾಳಿಗೆ ತೂರಿ ಹೋಗುತ್ತಿವೆ. ಮತ್ತೆ ತಾಡಪತ್ರಿ ಅಳವಡಿಸಲೂ ಹಣ ಇಲ್ಲದೇ ಬಡವರು ತತ್ತರಿಸಿದ್ದಾರೆ. ವೃದ್ಧರು, ಮಕ್ಕಳು ಕಂಗಾಲಾಗಿದ್ದಾರೆ. ಗುಡಿಸಲು ಮುಕ್ತ ಕರ್ನಾಟಕ ಮಾಡಬೇಕೆಂದು ಆಶ್ವಾಸನೆ ನೀಡುವ ಜನಪ್ರತಿನಿಧಿಗಳು ಒಂದು ಸಲ ಅಲೆಮಾರಿಗಳ ಬಡಾವಣೆಗೆ ಬಂದು ಅವ್ಯವಸ್ಥೆ ನೋಡಬೇಕು. ನಮ್ಮ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಅಲೆಮಾರಿ ಸಂಘದ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net