ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ದತ್ತಣ್ಣ ಮಾತನಾಡಿ, ಶಂಕರಾಚಾರ್ಯರ ತತ್ವಗಳು ಜೀವನದಲ್ಲಿ ಶಾಂತಿ, ತಾಳ್ಮೆ ಮತ್ತು ಸದ್ಭಾವನೆ ಬೆಳೆಸಲು ಪೂರಕವಾಗಿವೆ. ಇಂದಿನ ಸಮಾಜದಲ್ಲಿ ಕಂಡುಬರುವ ಅಸಮಾನತೆ, ದ್ವೇಷ ಮತ್ತು ಅಹಿತಕರ ಘಟನೆಗಳನ್ನು ನಿವಾರಿಸಲು ಅವರ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.