ರಾಜ್ಯ ಮಾಹಿತಿ ಆಯುಕ್ತರ ಜಿಲ್ಲಾ ಪ್ರವಾಸ

Haveri, RTI, Comissioners, Visit, Tour, May 30th,
Haveri, RTI, Comissioners, Visit, Tour, May 30th,
Published on
ಹಾವೇರಿ: ರಾಜ್ಯ ಮಾಹಿತಿ ಪೀಠ ಸಂ.4ರ ಆಯುಕ್ತ ರುದ್ರಣ್ಣ ಹರ್ತಿಕೋಟೆ ಹಾಗೂ ಪೀಠ 5ರ ಆಯುಕ್ತ ರಾಜಶೇಖರ ಎಸ್. ಮೇ 30ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಬೆಳಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳಿಗಾಗಿ ಆಯೋಜಿಸಿರುವ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಕುರಿತು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲೆಗೆ ಸಂಬಂಧಿಸಿದ ಆರ್‌ಟಿಐ ಅರ್ಜಿಗಳ ಹಾಗೂ ಮೇಲ್ಮನವಿಗಳ ಸ್ವೀಕೃತಿ, ವಿಲೇವಾರಿ ಮತ್ತು ಬಾಕಿ ಅರ್ಜಿಗಳ ಬಗ್ಗೆ ಎಲ್ಲ ಇಲಾಖೆಗಳಿಂದ ಅಧಿಕೃತ ಮಾಹಿತಿ ಪಡೆಯಲಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net