ಹಾನಗಲ್ಲ ತಾಲೂಕಿನ ನರೇಗಲ್ಲ ಗ್ರಾಮದ ಕಾರ ಹುಣ್ಣಿಮೆ ಕೋಮುಗಲಭೆ ಮಾಸುವ ಮುನ್ನವೇ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ಮತ್ತೊಂದು ಗಲಾಟೆ ನಡೆದು, ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಹಿಂದು ವ್ಯಾಪಾರಿಯನ್ನು ಮುಸ್ಲಿಂ ಯುವಕರು ಮನಬಂದಂತೆ ಥಳಿಸಿ, ಎದೆಗೆ ಕಲ್ಲು ಹಾಕಿ, ಮರ್ಮಾಂಗಕ್ಕೆ ಹೊಡೆದು ಹತ್ಯೆಗೈದಿದ್ದಾರೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಘಟನೆ. ಶಿವಾಜಿರಾವ್ ಬೈರೋಜಿ (60) ಮೃತ ವ್ಯಾಪಾರಿ.
ಶಿಬಾಜಿರಾವ್ ರಟ್ಟಿಹಳ್ಳಿಯಲ್ಲಿ ರಸ್ತೆ ಬದಿ ಪಾನ್ ಶಾಪ್ ಇಟ್ಟುಕೊಂಡಿದ್ದಾರೆ. ಮಗ ಭರತ ಬುಧವಾರ ರಾತ್ರಿ ವ್ಯಾಪಾರ ಮಾಡುತ್ತಿದ್ದ. ಈ ವೇಳೆ ವಾಸೀಂ ಮುಲ್ಲಾ ಐದು ಮೊಟ್ಟೆ ತೆಗೆದುಕೊಂಡು, ೧೦೦ ರೂ. ಕೊಟ್ಟಿದ್ದಾನೆ. ೫೦೦ ರೂ. ಕೊಟ್ಟಿದ್ದೇನೆ ಚಿಲ್ಲರೆ ಕೊಡು ಎಂದು ಜಗಳ ತೆಗೆದಿದ್ದಾನೆ. ಜಗಳ ಬಿಡಿಸಲು ಬಂದ ಭರತನ ತಂದೆ ಶಿವಾಜಿರಾವ್ ಅವರ ಎದೆಗೆ ಕಲ್ಲು ಎತ್ತಿ ಹಾಕಿದ್ದಾರೆ. 4 ಮುಸ್ಲಿಂ ಯುವಕರು ಸೇರಿ ಹಲ್ಲೆ ನಡೆಸಿದ್ದಾರೆ.
ನೆಲದ ಮೇಲೆ ಬಿದ್ದು ಒದ್ದಾಡಿ ಒದ್ದಾಡಿ ಪಾನ್ ಶಾಪ್ ವ್ಯಾಪಾರಿ ಮೃತಪಟ್ಟಿದ್ದಾರೆ.
ವಾಸೀಮ್ ಮುಲ್ಲಾ, ಸರ್ಪರಾಜ್ ಮುಲ್ಲಾ, ಸಾದಿಕ್ ಮುಲ್ಲಾ ಹಾಗೂ ಶಿರಾಜ್ ಮುಲ್ಲಾ ವಿರುದ್ಧ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮ ತಂದೆಯನ್ನು ಅರೋಪಿತರು ಹೊಡೆದು ಕೊಂದಿದ್ದಾರೆಂದು ಮಗ ಭರತ ದೂರು ನೀಡಿದ್ದಾರೆ.
ಸ್ಥಳಕ್ಕೆ ಎಸ್ಪಿ ಯಶೋದಾ ವಂಟಗೋಡಿ, ಎಎಸ್ಪಿ ಲಕ್ಷ್ಮಣ ಶಿರಕೋಳ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿತರು ತಲೆಮರೆಸಿಕೊಂಡಿದ್ದಾರೆ.