ಉದಾತ್ತ ಚಿಂತನೆ ಹೊಂದಿದ್ದ ಮೈ.ಚ.ಜಯದೇವ; ದೇಶಕ್ಕಾಗಿ ಮನೆ ತೊರೆದು, ಜೀವನ ಧಾರೆ ಎರೆದರು; ಆರ್‌ಎಸ್‌ಎಸ್‌ನ ಶ್ರೀಧರ ನಾಡಿಗೇರ ಅಭಿಮತ

Haveri, Rashtrothana Parishat, Book release, Programm,
Haveri, Rashtrothana Parishat, Book release, Programm,
Published on
ರಾಣೆಬೆನ್ನೂರು: ಅತ್ಯಂತ ಸರಳ ಜೀವನ ಹೊಂದಿದ್ದ ಮೈ.ಚ.ಜಯದೇವ ಅವರು ಉದಾತ್ತವಾದ ಚಿಂತನೆಗಳನ್ನು ಹೊಂದಿದ್ದರು. ರಾಷ್ಟ್ರೋತ್ಥಾನ ಪರಿಷತ್‌ನ ಉದಯಕ್ಕೆ ಕಾರಣರಾದವರಲ್ಲಿ ಇವರೂ ಒಬ್ಬರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಧರ ನಾಡಿಗೇರ ಅಭಿಮತ ವ್ಯಕ್ತಪಡಿಸಿದರು.
ರಾಷ್ಟ್ರೋತ್ಥಾನ ಪರಿಷತ್, ಬೆಂಗಳೂರು ಹಾಗೂ ರಾಷ್ಟ್ರೋತ್ಥಾನ ಬಳಗ ಹಾವೇರಿ ಜಿಲ್ಲಾ ಸಮಿತಿ ವತಿಯಿಂದ ನಗರದ ನಾಗಶಾಂತಿ ಉನ್ನತಿ ಪದವಿ ಕಾಲೇಜ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮೈ.ಚ.ಜಯದೇವ ಅವರ ‘ಅವಿಶ್ರಾಂತ ಧ್ಯೇಯ ಜೀವಿ’ ಹಾಗೂ ‘ಇತಿಹಾಸದ ಸೆರಗು’ ಎಸ್.ಆರ್.ರಾಮಸ್ವಾಮಿ ಅವರ ಪರಾಮರ್ಷ ಪ್ರಬಂಧಗಳು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಯದೇವ ಅವರು ಮೂಲತಃ ಮೈಸೂರಿನವರು. ದೇಶಕ್ಕಾಗಿ ಮನೆ ಬಿಟ್ಟು ಬಂದವರು. ಬೆಂಗಳೂರುನಲ್ಲಿ ಮೂಲೆ ಮೂಲೆ ಸುತ್ತಿದವರು. ರಾಷ್ಟ್ರೋತ್ಥಾನ ಪರಿಷತ್ ಆರಂಭವಾಗುವಲ್ಲಿ ಇವರ ಪಾತ್ರವೂ ಹಿರಿದು. ನಂತರ ಅವರು ಪ್ರಾಂತ ಕಾರ್ಯವಾಹರಾದರು. ಪ್ರಚಾರಕರಾದರು. ‘ಭಾರತ ಭಾರತಿ’ ಪುಸ್ತಕವನ್ನು ಪ್ರಕಟಿಸಿದರು. ರಾಷ್ಟ್ರೋತ್ಥಾನ ಬಳಗ, ಶೈಕ್ಷಣಿಕ ಚಟುವಟಿಕೆ, ಆರೋಗ್ಯ ಚಟುವಟಿಕೆ, ಸೇವಾ ಚಟುವಟಿಕೆ, ಸಾಹಿತ್ಯ ಚಟುವಟಿಕೆ ಪ್ರಾರಂಭಿಸಿದರು ಎಂದರು.
ಇತಿಹಾಸದ ಸೆರಗು ಪುಸ್ತಕ ಭಾರತ ಇತಿಹಾಸ, ಪ್ರಾಚೀನ ಇತಿಹಾಸ, ಮಧ್ಯಯುಗದ ಇತಿಹಾಸ, ಆಂಗ್ಲ ಶಾಸನ ಪರ್ವ, ರಾಜಾಂಗ ವಿನ್ಯಾಸ, ಸೇರಿದಂತೆ ಹಲವಾರು ಇತಿಹಾಸವನ್ನು ಒಳಗೊಂಡಿದೆ ಎಂದರು.
ರಾಷ್ಟ್ರೋತ್ಥಾನ ಬಳಗದ ಜಿಲ್ಲಾ ಸಂಚಾಲಕ ಡಾ.ರಾಮಮೋಹನ ರಾವ್ ಹಾಗೂ ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಮಾತನಾಡಿದರು. ಯುವ ಪೀಳಿಗೆ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸಾಮಾಜಿಕ ಚಟುವಟಿಕೆಗಳಲ್ಲಿ, ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ರಾಷ್ಟ್ರೋತ್ಥಾನ ಬಳಗದ ಸದಸ್ಯರಾದ ಬಸವರಾಜ ಕಮ್ಮಾರ, ಯಲ್ಲಪ್ಪ ಕುಡುಪಲಿ, ಮೃತ್ಯುಂಜಯ ಎಂ.ಎಂ., ಉತ್ತಮ ಮೋಡಿ, ಅಕ್ಷತಾ, ಮಂಗಳಾ ಎಸ್., ಸಂಘ ಪರಿವಾರದ ಕಾರ್ಯಕರ್ತರು, ಶೀಕ್ಷಕರು, ಮತ್ತಿತರರು ಉಪಸಿತರಿದ್ದರು.
"

ಭಾರತದ ನೈಜ ಇತಿಹಾಸವನ್ನು ನಮ್ಮ ಸಮಾಜ ಅಧ್ಯಯನ ಮಾಡಬೇಕು. ನಮ್ಮ ದೇಶದ ಹೋರಾಟದ ಇತಿಹಾಸವನ್ನು ನಮ್ಮ ಇಂದಿನ, ಮುಂದಿನ ಪೀಳಿಗೆಗೆ ತಿಳಿಸಬೇಕು. ಈ ನಿಟ್ಟಿನಲ್ಲಿ ಇಂತಹ ಸಾಹಿತ್ಯ ವಿಶಿಷ್ಟವಾದ ಕೊಡುಗೆಯನ್ನು ನೀಡುತ್ತದೆ.

— ಶ್ರೀ ಪ್ರಕಾಶಾನಂದ ಮಹಾರಾಜರು, ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ, ರಾಣೆಬೆನ್ನೂರು


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net