ಗ್ರಾಮೀಣ ಪೊಲೀಸ್ ಠಾಣೆಗೆ ನುಗ್ಗಿದ ಮಳೆ ನೀರು; ಹಲವು ವಸ್ತುಗಳಿಗೆ ಹಾನಿ * ಹಾವೇರಿ- ಅಗಡಿ ರಸ್ತೆ ತುಂಬ ಹರಿದ ನೀರು

Haveri, Ranebennure, Rain, Effect, Rural Police Station,
Haveri, Ranebennure, Rain, Effect, Rural Police Station,
Published on
ರಾಣೆಬೆನ್ನೂರ: ನಗರದಲ್ಲಿ ಶನಿವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಹಲವು ರಸ್ತೆಗಳು ಜಲಾವೃತಗೊಂಡಿದ್ದವು. ನಗರದ ಹಲೆಯ ಪಿಬಿ ರಸ್ತೆಯ ಗ್ರಾಮಾಂತರ ಪೊಲೀಸ್ ಠಾಣೆಗೆ ಮಳೆ ನೀರು ನುಗ್ಗುವ ಮೂಲಕ ಠಾಣೆಯ ಹಲವು ವಸ್ತುಗಳಿಗೆ ಹಾನಿ ಉಂಟಾಗಿದೆ.
ಭಾರೀ ಮಳೆಯಿಂದಾಗಿ ಠಾಣೆಯ ಎದುರಿನ ಚರಂಡಿ ತುಂಬಿ ಹರಿದಿದೆ. ಕಸದಿಂದ ಆವೃತವಾಗಿದ್ದರಿಂದ ಚರಂಡಿ ಮೂಲಕ ಮಳೆ ನೀರು ಠಾಣೆಯ ಆವರಣಕ್ಕೆ ನುಗ್ಗಿದೆ. ಠಾಣೆಯ ಕೆಲ ಕೊಠಡಿಗಳಿಗೆ ನೀರು ನುಗ್ಗಿದೆ. ಸಿಪಿಐ, ಸಿಬ್ಬಂದಿ ಕೊಠಡಿಗೆ ನೀರು ನುಗ್ಗಿ
ಠಾಣೆಯ ಹೆಡ್ ಕಾನ್‌ಸ್ಟೆಬಲ್ ಕೊಠಡಿ, ಸಿಪಿಐ ಕೊಠಡಿ ಹಾಗೂ ಬರಹಗಾರರ ಕೊಠಡಿಗಳಿಗೆ ನೀರು ನುಗ್ಗಿದೆ. ಕೊಠಡಿಯಲ್ಲಿದ್ದ ಕೆಲ ವಸ್ತುಗಳಿಗೆ ಹಾನಿಯಾಗಿದೆ. ನಂತರ ಠಾಣೆಯ ಸಿಬ್ಬಂದಿ ಮಳೆ ನೀರು ಹೊರಗೆ ಹಾಕುವ ಮೂಲಕ ಹೆಚ್ಚಿನ ಹಾನಿಯನ್ನು ತಪ್ಪಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net