ಆರೋಪಿ ಕುಮಾರ ಈ ಮೊದಲು ಬೆಂಗಳೂರಿನ ಗುರುಮೂರ್ತಿ ಅವರ ಅಂಗಡಿಗೆ ಹಣ್ಣು, ತರಕಾರಿ ಸರಬರಾಜು ಮಾಡುತ್ತಿದ್ದ. ಮೂರು ತಿಂಗಳಿಂದ ಕೆಲಸ ಬಿಟ್ಟಿದ್ದ. ಮೊನ್ನೆ ಕರೆ ಮಾಡಿ, ನಮ್ಮೂರಿನಲ್ಲಿ ಮನೆ ಕಟ್ಟಲು ಅಡಿಪಾಯಕ್ಕಾಗಿ ಅಗೆಯುವಾಗ ಚಿನ್ನದ ನಾಣ್ಯಗಳು (ನಿಧಿ) ಸಿಕ್ಕಿವೆ. ಅದರಲ್ಲಿ ಕೆಲ ನಾಣ್ಯಗಳಿಂದ ಚಿನ್ನದ ಸರ ಮಾಡಿಸಿಕೊಂಡಿದ್ದೇನೆ. ಉಳಿದ ನಾಣ್ಯಗಳನ್ನು ನಿನಗೆ ಕೊಡುತ್ತೇನೆ. ಹಣ ತೆಗೆದುಕೊಂಡು ಬಾ ಎಂದು ತಿಳಿಸಿದ್ದ. ಶನಿವಾರ ಸಂಜೆ ಕವಲೆತ್ತು ಗ್ರಾಮದ ದುರ್ಗಾದೇವಿ ದೇವಸ್ಥಾನದ ಬಳಿ ಕರೆಸಿಕೊಂಡಿದ್ದ. ಐವರೊಂದಿಗೆ ಬಂದ ಆರೋಪಿ, 6 ಲಕ್ಷ ರೂ. ಪಡೆದು 2 ಸಣ್ಣ ಚಿನ್ನದ ನಮೂನೆಯ ಕಾಯಿನ್‌ಗಳನ್ನು ಕೊಟ್ಟು, ಉಳಿದ ಕಾಯಿನ್ ಅಂಗಡಿಗೆ ಬಮದು ಕೊಡುತ್ತೇನೆ ಎಂದು ಹೇಳಿ ಮೋಸ ಮಾಡಿದ್ದಾನೆ ಎಂದು ಗುರುಮೂರ್ತಿ ದೂರಿನಲ್ಲಿ ಹೇಳಿಕೊಂಡಿದ್ದಾರೆ.