ಜುಲೈನಿಂದಲೇ ಪಡಿತರ ಅಕ್ಕಿ ಜತೆಗೆ ಜೋಳ ವಿತರಣೆ; ವಿಜಯವಾಣಿ ವರದಿ ಪರಿಣಾಮ; ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್; ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಸರಬರಾಜು ಆರಂಭ

Haveri, Raion, Rice, Jowar,
Haveri, Raion, Rice, Jowar,
Published on
ಹಾವೇರಿ: ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯಡಿ ಜುಲೈನಿಂದ ಪಡಿತರ ಅಕ್ಕಿಯ ಜತೆಗೆ ಜೋಳ ವಿತರಣೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಆಹಾರ ಇಲಾಖೆಯಿಂದ ಅಂತ್ಯೋದಯ ಪಡಿತರ ಚೀಟಿ ಹೊಂದಿದ ಪ್ರತಿ ಪಡಿತರ ಚೀಟಿಗೆ ಉಚಿತವಾಗಿ 35 ಕೆ.ಜಿ ಆಹಾರ ಧಾನ್ಯಗಳಲ್ಲಿ 21 ಕೆ.ಜಿ ಜೋಳ ಹಾಗೂ 14 ಕೆಜಿ ಅಕ್ಕಿ ವಿತರಿಸಲಾಗುವುದು. ಪಿಎಚ್‌ಎಚ್ (ಬಿಪಿಎಲ್) ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 7 ಕೆಜಿ ಅಕ್ಕಿ, ಮೂರು ಕೆಜಿ ಜೋಳ ವಿತರಿಸಲಾಗುವುದು.
ದಕ್ಷಿಣ ಕರ್ನಾಟಕದಲ್ಲಿ ಮೇನಿಂದಲೇ ರಾಗಿ ವಿತರಣೆ ಮಾಡಲಾಗುತ್ತಿತ್ತು. ಆದರೆ, ಜೂನ್ ಕಳೆದರೂ ಉತ್ತರ ಕರ್ನಾಟಕದಲ್ಲಿ ಜೋಳ ವಿತರಣೆ ಮಾಡಿರಲಿಲ್ಲ. ಜತೆಗೆ 2024ರಲ್ಲಿ ಕಳಪೆ ಜೋಳ ವಿತರಣೆ ಮಾಡಿದ್ದ ಕುರಿತು ‘ವಿಜಯವಾಣಿ’ ಪತ್ರಿಕೆ ವಿಶೇಷ ವರದಿ ಮೂಲಕ ಬೆಳಕು ಚೆಲ್ಲಿತ್ತು. ವರದಿ ಬೆನ್ನಲ್ಲೇ ರಾಜ್ಯ ಸರ್ಕಾರ ಅಕ್ಕಿ ಜತೆಗೆ ಜೋಳ ವಿತರಣೆಗೆ ಕ್ರಮ ಜರುಗಿಸಿದೆ.
ಅಂತರ್ ರಾಜ್ಯ/ ಅಂತರ್ ಜಿಲ್ಲೆ ಪೋರ್ಟೆಬಿಲಿಟಿ ಜಾರಿಯಲ್ಲಿದೆ. ಹೀಗಾಗಿ, ಯಾವುದೇ ಜಿಲ್ಲೆಯ ಪಡಿತರ ಚೀಟಿಗೆ ಯಾವುದೇ ನಾಯಬೆಲೆ ಅಂಗಡಿಯಲ್ಲಿ ಪಡಿತರ ವಸ್ತುಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಜುಲೈನಲ್ಲಿ ನ್ಯಾಯಬೆಲೆ ಅಂಗಡಿಕಾರರು, ಸರ್ಕಾರ ನಿಗದಿಪಡಿಸಿದ ಸಮಯದಲ್ಲಿ ನ್ಯಾಯಬೆಲೆ ಅಂಗಡಿಯನ್ನು ತೆರೆದು ಪಡಿತರ ವಸ್ತುಗಳನ್ನು ವಿತರಿಸುತ್ತಾರೆ. ಜಿಲ್ಲೆಯ ಎಲ್ಲ ಪಡಿತರ ಚೀಟಿದಾರರು ಮೇಲಿನಂತೆ ಪಡಿತರ ಆಹಾರ ಧಾನ್ಯ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
"

ಜುಲೈನಿಂದ ಕನಿಷ್ಠ ಮೂರು ತಿಂಗಳವರೆಗೆ ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಪಡಿತರ ಅಕ್ಕಿ ಜತೆಗೆ ಜೋಳ ವಿತರಿಸಲಾಗುವುದು. ಮೂರು ತಿಂಗಳಿಗೆ ಆಗುವಷ್ಟು ಜೋಳ ದಾಸ್ತಾನು ಮಾಡಲಾಗಿದೆ.

— ಎಸ್.ಆರ್.ಪಾಟೀಲ, ಉಪಾಧ್ಯಕ್ಷ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net