ಭಾರೀ ಮಳೆ, ಗಾಳಿ ಸಾಧ್ಯತೆ, ಮುನ್ನೆಚ್ಚರಿಕೆ ವಹಿಸಿ; ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಿರಿ; ಮಳೆಗಾಲದಲ್ಲಿ ಜಾಗ್ರತೆ ವಹಿಸಲು ಜನ, ಅಧಿಕಾರಿಗಳಿಗೆ ಡಿಸಿ ಸೂಚನೆ

Haveri, Rainy Season, DC, Instrucitions, to Public,
Haveri, Rainy Season, DC, Instrucitions, to Public,
Published on
ಹಾವೇರಿ: ಜಿಲ್ಲೆಯಾದ್ಯಂತ ಮುಂಬರುವ ಮಳೆಗಾಲದ ಸಂದರ್ಭದಲ್ಲಿ ಭಾರೀ ಮಳೆ, ಗಾಳಿ ಹಾಗೂ ಗುಡುಗು, ಮಿಂಚು ಸಂಭವಿಸುವ ಸಾಧ್ಯತೆ ಇರುವುದರಿಂದ, ಜಿಲ್ಲೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದ್ದಾರೆ.
ಸಾರ್ವಜನಿಕರು, ಮಕ್ಕಳು, ಕೂಲಿ ಕಾರ್ಮಿಕರು, ವ್ಯಾಪಾರಿಗಳು ಮಳೆ, ಗಾಳಿ, ಸಿಡಿಲು ಬೀಳುವ ಸಂದರ್ಭದಲ್ಲಿ ಹೊರಗೆ ಓಡಾಡಬಾರದು. ಸುರಕ್ಷಿತ ಕಟ್ಟಡದಲ್ಲಿ, ಪ್ರದೇಶಗಳಲ್ಲಿ ಆಶ್ರಯ ಪಡೆಯಬೇಕು. ಹೊರಗಿನ ಕೃಷಿ ಚಟುವಟಿಕೆಗಳಿಂದ ದೂರ ಇರಬೇಕು. ಸಾರ್ವಜನಿಕರು, ಪ್ರವಾಸಿಗರು, ಮೀನುಗಾರರು ನದಿ, ನೀರಿರುವ ಪ್ರದೇಶಗಳಲ್ಲಿ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು.
ಹೆಚ್ಚು ಮಳೆ ವೇಳೆ ಕೆಲವು ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಸಂಭವ ಹೆಚ್ಚಾಗಿರುತ್ತದೆ. ಹಾಗಾಗಿ, ಇಂತಹ ಪ್ರದೇಶಗಳಲ್ಲಿ ವಾಸಿಸುವ ಸಾರ್ವಜನಿಕರು ತಹಸೀಲ್ದಾರ್ ಕಚೇರಿ ಅಥವಾ ಗ್ರಾಮ ಪಂಚಾಯಿತಿ ಸಿಬ್ಬಂದಿ ಸಂಪರ್ಕಿಸಿ, ಹತ್ತಿರದ ಕಾಳಜಿ ಕೇಂದ್ರದಲ್ಲಿ ಮುಂಚಿತವಾಗಿಯೇ ಉಳಿಯಬಹುದು.
ವಿದ್ಯುತ್ ಕಂಬಗಳಿಂದ ದೂರವಿರಿ:
ಮಳೆಯ ಸಂದರ್ಭದಲ್ಲಿ ಮಕ್ಕಳು, ಸಾರ್ವಜನಿಕರು ಅಪಾಯಕಾರಿ ಮರಗಳು, ವಿದ್ಯುತ್ ಕಂಬಗಳ ಹತ್ತಿರ ಹೋಗಬಾರದು. ತುಂಡಾದ ವಿದ್ಯುತ್ ತಂತಿಗಳಿಂದ ಎಚ್ಚರಿಕೆ ವಹಿಸಬೇಕು. ದುರ್ಬಲವಾದ ಹಳೆಯ ಕಟ್ಟಡ ಅಥವಾ ಮರಗಳ ಹತ್ತಿರ, ಮರಗಳ ಕೆಳಗೆ ನಿಲ್ಲಬಾರದು. ಕಟ್ಟಡಗಳ ಮೇಲೆ ಅಪಾಯಕಾರಿ ಹಾಗೂ ದುರ್ಬಲವಾದ ರೆಂಬೆ-ಕೊಂಬೆಗಳಿದ್ದಲ್ಲಿ ಮೊದಲೇ ಕತ್ತರಿಸಿ ವಾಸಿಸುವ ಕಟ್ಟಡಗಳನ್ನು ರಕ್ಷಿಸಿಕೊಳ್ಳಬೇಕು.
ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಿ
ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ನಿಯೋಜನೆಗೊಂಡ ನೋಡಲ್ ಅಧಿಕಾರಿಗಳು, ಸ್ಥಳೀಯ ಸಂಸ್ಥೆಯ ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು. ಜನರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಬೇಕೆಂದು ಡಿಸಿ ಸೂಚಿಸಿದ್ದಾರೆ.
ತಾಲೂಕುವಾರು ತುರ್ತು ಸಾಹಾಯವಾಣಿ
ಹಾವೇರಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ- 08375-249102, ಹಾವೇರಿ ತಹಸೀಲ್ದಾರ್ ಕಚೇರಿ-08375-232445, ತಹಸೀಲ್ದಾರ ಮೊ. 81232 08284, ತಾಲೂಕು ಪಂಚಾಯಿತಿ- 08375-232372, ಕಾರ್ಯ ನಿರ್ವಾಹಕ ಅಧಿಕಾರಿ ಮೊ.ಸಂ. 9480 86110, ಹಾವೇರಿ ಅಗ್ನಿಶಾಮಕ ಕಚೇರಿ -08375-232666, ಅಗ್ನಿಶಾಮಕ ಠಾಣಾಧಿಕಾರಿ ಮೊ.ಸಂ. 94808 23803. ಬ್ಯಾಡಗಿ ತಹಸೀಲ್ದಾರ್ ಕಚೇರಿ-08375-228428, ತಹಸೀಲ್ದಾರ್ ಮೊ.ಸಂ.97314 75177, ತಾ.ಪಂ. 08375-228332, ತಾಪಂ ಇ.ಒ. ಮೊ.ಸಂ. 94808 68100, ಅಗ್ನಿಶಾಮಕ ಕಚೇರಿ 08375-200113, ಅಗ್ನಿಶಾಮಕ ಠಾಣಾಧಿಕಾರಿ ಮೊ.ಸಂ. 94808 23808.
ಹಾನಗಲ್ಲ ತಹಸೀಲ್ದಾರ್ ಕಚೇರಿ -08379-262241, ತಹಸೀಲ್ದಾರ್ ಮೊ.ಸಂ. 89714 12981, ತಾಪಂ- 08379-262225, ತಾಪಂ ಇ.ಒ. ಮೊ.ಸಂ. 94608 68105, ಅಗ್ನಿಶಾಮಕ ಕಚೇರಿ 08379-262801, ಅಗ್ನಿಶಾಮಕ ಠಾಣಾಧಿಕಾರಿ ಮೊ.ಸಂ. 94808 23805, ಹಿರೇಕೆರೂರ ತಹಸೀಲ್ದಾರ್ ಕಚೇರಿ-08376-282231, ತಹಸೀಲ್ದಾರ್ ಮೊ.ಸಂ.80733 03525, ತಾಪಂ- 08376-282235, ತಾಪಂ ಇಒ ಮೊ.ಸಂ. 94808 68115, ಅಗ್ನಿಶಾಮಕ ಕಚೇರಿ- 08376-282555, ಅಗ್ನಿಶಾಮಕ ಠಾಣಾಧಿಕಾರಿ ಮೊ.ಸಂ.94808 23806.
ರಾಣೆಬೆನ್ನೂರ ತಹಸೀಲ್ದಾರ್ ಕಚೇರಿ-08373-260449, ತಹಸೀಲ್ದಾರ್ ಮೊ.ಸಂ. 99020 30999, ತಾಪಂ- 08373-266320, ತಾಪಂ ಇ.ಒ. ಮೊ.ಸಂ.94808 68120, ಅಗ್ನಿಶಾಮಕ -08373-269101, ಅಗ್ನಿಶಾಮಕ ಠಾಣಾಧಿಕಾರಿ ಮೊ.ಸಂ. 94808 23804. ರಟ್ಟಿಹಳ್ಳಿ ತಹಸೀಲ್ದಾರ್ ಕಚೇರಿ-08376-200147, ತಹಸೀಲ್ದಾರ್ ಮೊ.ಸಂ. 99802 65330, ತಾಪಂ- 99865 78657, ತಾಪಂ ಇ.ಒ. ಮೊ.ಸಂ.94808 68115, ಅಗ್ನಿಶಾಮಕ ಕಚೇರಿ -08376-286101, ಅಗ್ನಿಶಾಮಕ ಠಾಣಾಧಿಕಾರಿ ಮೊ.ಸಂ.94808 23806.
ಸವಣೂರ ತಹಸೀಲ್ದಾರ್ ಕಚೇರಿ-08378-241626, ತಹಸೀಲ್ದಾರ್ ಮೊ.ಸಂ. 96066 58411, ತಾಪಂ ಕಚೇರಿ 9945321424, ತಾಪಂ ಇ.ಒ. ಮೊ.ಸಂ.94808 68125, ಅಗ್ನಿಶಾಮಕ ಕಚೇರಿ -08378-241101, ಅಗ್ನಿಶಾಮಕ ಠಾಣಾಧಿಕಾರಿ ಮೊ.ಸಂ.94808 23809. ಶಿಗ್ಗಾಂವಿ ತಹಸೀಲ್ದಾರ್ ಕಚೇರಿ-08378-255402, ತಹಸೀಲ್ದಾರ್ ಮೊ.ಸಂ.- 99165 65459, ತಾಪಂ- 08378-255247, ತಾಪಂ ಇ.ಒ. ಮೊ.ಸಂ.94808 68130, ಅಗ್ನಿಶಾಮಕ ಕಚೇರಿ- 08378-255101 ಹಾಗೂ ಅಗ್ನಿಶಾಮಕ ಠಾಣಾಧಿಕಾರಿ ಮೊ.ಸಂ.94808 23807 ಅವರನ್ನು ವಿಪತ್ತು ಸಮಯದಲ್ಲಿ ಸಂಪರ್ಕಿಸಬಹುದು ಎಂದು ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net