ಹಾವೇರಿ; ಕಾದ ಕಾವಲಿಯಂತಾಗಿದ್ದ ಇಳೆಗೆ ತಂಪೆರೆದ ಮಳೆ

Haveri, Rain, Effect, Heat, Cold, Climate,
Haveri, Rain, Effect, Heat, Cold, Climate,
Published on
ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ಶಹರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ರಭಸವಾದ ಮಳೆ ಸುರಿದಿದ್ದು, ಬೇಸಿಗೆಯ ಬಿಸಿಲಿನ ತಾಪದಿಂದ ಕಾದ ಕಾವಲಿಯಂತಾಗಿದ್ದ ಇಳೆಗೆ ತಂಪೆರೆದಿದೆ.
ಬೆಳಗ್ಗೆ ನಸುಕಿನ ಜಾವ ಸುಮಾರು ಅರ್ಧ ಗಂಟೆ ರಭಸವಾಗಿ ಮಳೆ ಸುರಿದಿದೆ. ಮಧ್ಯಾಹ್ನದ ವರೆಗೆ ಮೋಡ ಕವಿದ ವಾತಾವರಣ ಇತ್ತು. ಸಂಜೆ ಮತ್ತೆ ಸುಮಾರು ಅರ್ಧ ಗಂಟೆವರೆಗೆ ರಭಸವಾಗಿ ಮಳೆ ಸುರಿದಿದೆ. ಮಳೆ ಜತೆಗೆ ಭಾರೀ ಗಾಳಿ ಬೀಸಿತ್ತು. ಇದರಿಂದ ಹಾವೇರಿ ಶಹರದಲ್ಲಿ ರಸ್ತೆ ಮೇಲೆ ಚರಂಡಿ ಮಿಶ್ರಿತ ಮಳೆನೀರು ಹರಿಯಿತು.
ಹಲವೆಡೆ ಚರಂಡಿಗಳು ತುಂಬಿಕೊಂಡಿದ್ದರಿಂದ ರಸ್ತೆ ಮೇಲೆ ಹರಿಯಿತು. ರಸ್ತೆ ಮೇಲೆ ಕಸ ತುಂಬಿಕೊಂಡಿತ್ತು. ಇದರಿಂದ ಸಾರ್ವಜನಿಕರು ಪರದಾಡಿದರು. ಗುರುವಾರ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು, ಗ್ರಾಹಕರು ಸಂಕಷ್ಟ ಅನುಭವಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net