ಶ್ರೀ ಸತ್ಯಸಾಯಿ ಪ್ರೇಮವಾಹಿನಿ ರಥಯಾತ್ರೆಗೆ ಚಾಲನೆ

satya sai, rathotsava
satya sai, rathotsava
Published on
ಹಾವೇರಿ: ನಗರದ ಹುಕ್ಕೇರಿ ಮಠದ ಆವರಣದಲ್ಲಿ ಮಂಗಳವಾರ ಶ್ರೀ ಸತ್ಯಸಾಯಿ ಬಾಬಾರವರ ಅವತರಣ ಶತಮಾನೋತ್ಸವ ಪ್ರಯುಕ್ತ ಬಾಬಾರ ದಿವ್ಯಾವತಾರದ ಸೌರಭವನ್ನು ಪಸರಿಸಲು ಮತ್ತು ದಿವ್ಯಪ್ರೇಮದ ಸಂದೇಶ ಸಾರಲು ಹಮ್ಮಿಕೊಂಡಿರುವ ಶ್ರೀ ಸತ್ಯಸಾಯಿ ಪ್ರೇಮವಾಹಿನಿ ರಥಯಾತ್ರೆಗೆ ಮಂಗಳವಾರ ಶ್ರೀ ಸದಾಶಿವ ಸ್ವಾಮೀಜಿ ಚಾಲನೆ ನೀಡಿದರು. 
ಜಿಲ್ಲೆಯ ಹಾನಗಲ್‌ನಿಂದ ಮಂಗಳವಾರ ಬೆಳಗ್ಗೆ ಹೊರಟು ಅಕ್ಕಿಆಲೂರ ಗ್ರಾಮಕ್ಕೆ ಬಂದು ಪೂಜಾ ಅರ್ಚನೆ ನಡೆಸಲಾಯಿತು. ಅಲ್ಲಿಂದ ತಾಲೂಕಿನ ಕುಳೇನೂರ ಗ್ರಾಮದ ಬೈಲ್‌ಬಸವೇಶ್ವರ ದೇವಸ್ಥಾನ ತಲುಪಿ ಅರ್ಚನೆ, ಮಹಾಮಂಗಳಾರತಿ ನಡೆಸಿ ವಿಶ್ರಾಂತಿ ಪಡೆದುಕೊಳ್ಳಲಾಯಿತು. ನಂತರ ಹಾವೇರಿ ನಗರಕ್ಕೆ ಆಗಮಿಸಿದ ರಥಯಾತ್ರೆಯನ್ನು ಹುಕ್ಕೇರಿಮಠ ಶ್ರೀಗಳು ಸ್ವಾಗತಿಸಿದರು.
 ರಥಯಾತ್ರೆಯಲ್ಲಿ ಕುಂಭ ಹೊತ್ತ ಮಹಿಳೆಯರು, ಕಳಸ, ವೇದಘೋಷ, ಮಂಗಳ ದ್ರವ್ಯಧಾರಕರು, ಮಂಗಳವಾದ್ಯ, ಕಲಾ ಮೇಳಗಳೊಂದಿಗೆ ಎಂ.ಜಿ ರಸ್ತೆ ಮೂಲಕ ಸಾಗಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ತಲುಪಿತು. ಈ ವೇಳೆ ಸಾರ್ವಜನಿಕರಿಗೆ ಬಾಬಾರವರ ದಿವ್ಯದರ್ಶನ, ಪಾದುಕಾ ನಮಸ್ಕಾರ ಮತ್ತು ವಿಭೂತಿ ಪ್ರಸಾದ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ವೀರಭದ್ರೇಶ್ವರ ದೇವಸ್ಥಾನದಲ್ಲಿ ವೇಧಘೋಷ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
 ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ಜಿಲ್ಲಾಧ್ಯಕ್ಷ ಬಸವರಾಜ ಹರಮಗಟ್ಟಿ, ಮಲ್ಲಿಕಾರ್ಜುನ ಸಾತೇನಹಳ್ಳಿ, ಸಮಿತಿಯ ಶಂಕ್ರಯ್ಯ ವಾಟನಾಳಮಠ, ರಘುವೀರ ಚೌಹಾಣ, ರಾಜಶೇಖರ ಹುಣಸಿಕಟ್ಟಿ, ರಾಜು ಜವಳಕರ, ಜಯಕುಮಾರ ಉಳ್ಳಾಗಡ್ಡಿ, ಬಾಬುರಾವ ಹುದ್ದಾರ, ಕೃಷ್ಣಾಜೀ ಲೋಖಂಡೆ, ಈರಣ್ಣ ವಳಸಂಗದ, ನಿಖಿಲ್ ದೊಗ್ಗಳ್ಳಿ, ಕುಮಾರ ಹಿರೇಮಠ, ರಾಘವೇಂದ್ರ ಕಾಳಂಚೆ, ಹನುಮಂತಪ್ಪ ಮಡಿವಾಳರ, ಬಸವರಾಜ ಭೈರಕ್ಕನವರ, ಕುಮಾರ ಬೋಸ್ಲೆ, ಈರಣ್ಣ ಗಡಾದ, ಪ್ರದೀಪ ವಾಲಿಶೆಟ್ಟರ, ಚನ್ನಪ್ಪ ಕಡೇಮನಿ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net