ಪೊಲೀಸ್ ಸೇವೆಗಳು ನಕಾರಾತ್ಮಕವಾಗಿ ಪ್ರಾರಂಭವಾಗುತ್ತವೆ ಹೊರತು ಯಾವುದೂ ಒಳ್ಳೆಯ ಕೆಲಸದಿಂದ ಪ್ರಾರಂಭವಾಗುವುದಿಲ್ಲ. ಸಮಾಜದಲ್ಲಿ ನಿತ್ಯ ಜಗಳ, ಅಪಘಾತ, ಕೊಲೆ, ಸುಲಿಗೆ, ಕಳ್ಳತನ ಹೀಗೆ ವಿವಿಧ ಹಂತದ ನಕಾರಾತ್ಮಕಗಳನ್ನು ಶಮನಗೊಳಿಸಲು ಕೆಲಸ ಮಾಡುತ್ತೇವೆ. ನಿತ್ಯ ಸಮಾಜದಲ್ಲಿ ಶಾಂತಿ, ಸೌಹಾರ್ದತೆಯನ್ನು ನಿರಂತರವಾಗಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ದ್ವಜ ದಿನಾಚರಣೆ ಮಾಡುತ್ತೇವೆ. ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ಸಂಗ್ರವಾದ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಅರ್ಪಿಸುತ್ತೇವೆ. ನಿವೃತ್ತಿ ಹೊಂದಿದ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ಕುಟುಂಬದವರ ವೈದ್ಯಕೀಯ ವೆಚ್ಚ ಹಾಗೂ ಶವ ಸಂಸ್ಕಾರಕ್ಕಾಗಿ ಧನಸಹಾಯವನ್ನು ನೀಡಲಾಗುತ್ತದೆ. ಸಂಗ್ರಹವಾದ ಹಣದಲ್ಲಿ ಅರ್ಧದಷ್ಟು ಪೊಲೀಸ್ ಕಲ್ಯಾಣ ನಿಧಿಗೆ ಹಾಗೂ ಉಳಿದ ಅರ್ಧ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿಗೆ ಉಪಯೋಗಿಸಲಾಗುತ್ತದೆ ಎಂದರು.