

ಮನರೇಗಾ ಯೋಜನೆ ಹೆಸರನ್ನು ಬದಲಾಯಿಸುವ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಎರಡನೇ ಬಾರಿ ಕೊಲೆ ಮಾಡಿದ್ದಾರೆ. ಬಡವರ ಕೈತುತ್ತು ಕಿತ್ತುಕೊಳ್ಳಲು ಹುನ್ನಾರ ನಡೆಸಿದ್ದಾರೆ. ಬಡವರು ಕಾಂಗ್ರೆಸ್ ಪರ ಇರೋದು ಮೋದಿಗೆ ಗೊತ್ತಿದೆ. ಅದಕ್ಕೋಸ್ಕರವೇ ಯೋಜನೆ ಹೆಸರು ಬದಲಾಯಿಸಿದ್ದಾರೆ. ದೇಶ ಹೊಡೆಯುವ, ಕೂಲಿ ಕಾರ್ಮಿಕರ, ಬಡವರ ವಿರೋಧಿ ಪಕ್ಷಕ್ಕೆ ತಕ್ಕಶಾಸ್ತಿ ಮಾಡಬೇಕಿದೆ.
ವಿಬಿ ಜೀರಾಮ್ ಜೀ ಯೋಜನೆ ಜನಸಾಮಾನ್ಯರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಗ್ರಾಪಂ ಆಡಳಿತ ಮೊಟಕುಗೊಳಿಸಿದ್ದಾರೆ. ಕೇಂದ್ರ ಸರ್ಕಾರ ಸೂಚಿಸುವ ಕಾಮಗಾರಿ ಮಾತ್ರ ಕೈಗೊಳ್ಳಬಹುದಾಗಿದೆ. ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ. ಕೇಂದ್ರ ಸರ್ಕಾರ ಯೋಜನೆ ವಾಪಸ್ ಪಡೆದು, ಯಥಾಸ್ಥಿತಿ ಮನರೇಗಾ ಯೋಜನೆ ಮುಂದುವರೆಸಬೇಕು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಡಿಸೆಂಬರ್‌ನಲ್ಲಿ ಕೇವಲ ಏಳು ತಾಸು ಚರ್ಚೆ ನಡೆಸಿ ಕಾಯ್ದೆ ಬದಲಾಯಿಸಿ, ಯೋಜನೆಯ ಬೆನ್ನೆಲುಬು ಮುರಿದಿದ್ದಾರೆ. ದಶಕಗಳ ಕಾಲ ಗ್ರಾಮೀಣ ಭಾಗದ ಜನರ ಭಾಗವಾಗಿದ್ದ ಕಾಯ್ದೆ ತಿದ್ದುಪಡಿ ಮಾಡಿ ದುರ್ಬಲಗೊಳಿಸಿದ್ದಾರೆ. ಅಹಿಂಸೆಯ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದ ಗಾಂಧೀಜಿಯವರ ಹೆಸರನ್ನು ಅಳಿಸಿ ಹಾಕಿದ್ದಾರೆ. ಇದು ಖಂಡನೀಯ.