ವಲಸೆ ಬಂದಿರುವ ಲಿಂಬಿಕಾಯಿ ಬದಲಾವಣೆ ಮಾಡಿ; ಕೆಪಿಸಿಸಿ ಪದವೀಧರ ಘಟಕದ ಕಾರ್ಯದರ್ಶಿ ರಾಘವೇಂದ್ರ ಬಾಸೂರ ಆಗ್ರಹ

mlc election, congress, ticket,
mlc election, congress, ticket,
Published on
ಹಾವೇರಿ: ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಬಿಟ್ಟು, ಬೇರೆ ಪಕ್ಷದಿಂದ ಬಂದಿರುವ ಮೋಹನ ಲಿಂಬಿಕಾಯಿ ಅವರಿಗೆ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ನೀಡಲಾಗಿದ್ದು, ಇದನ್ನು ಮರುಪರಿಶೀಲನೆ ಮಾಡಿ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೇಟ್ ನೀಡಬೇಕು ಎಂದು ಕೆಪಿಸಿಸಿ ಪದವೀಧರ ಘಟಕದ ಕಾರ್ಯದರ್ಶಿ ರಾಘವೇಂದ್ರ ಬಾಸೂರ ಒತ್ತಾಯಿಸಿದ್ದಾರೆ.
ತಾವು ಪಶ್ಚಿಮ ಪದವೀಧರ ಕ್ಷೇತ್ರದ ಪ್ರಬಲ ಆಕಾಂಕ್ಷಿಗಳಾಗಿದ್ದು, ಎರಡು ವರ್ಷಗಳಿಂದ ಜಿಲ್ಲೆ ಸೇರಿದಂತೆ ಕ್ಷೇತ್ರದಲ್ಲಿ ಪದವೀಧರರು, ವಕೀಲರು, ಶಿಕ್ಷಕರೊಂದಿಗೆ ನೇರ ಸಂಪರ್ಕದಲ್ಲಿದ್ದೇನೆ. ಉದ್ಯೋಗ ಮೇಳಗಳ ಮೂಲಕ ಹಲವರಿಗೆ ಉದ್ಯೋಗ ಕೊಡಿಸಿದ್ದೇನೆ. ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ.
ನನ್ನಂತೆ ಹಲವು ನಿಷ್ಠಾವಂತ ಕಾರ್ಯಕರ್ತರನ್ನು ಬಿಟ್ಟು, ಒಂದು ದಿನವೂ ಕಾಂಗ್ರೆಸ್ ಬಾವುಟ ಹಿಡಿಯದವರಿಗೆ, ಬೇರೆ ಪಕ್ಷದಿಂದ ವಲಸೆ ಬಂದವರಿಗೆ ಟಿಕೇಟ್ ನೀಡಿರುವುದು ಬೇಸರ ಮೂಡಿಸಿದೆ. ಇದನ್ನು ಮರುಪರಿಶೀಲಿಸಿ, ನಿಷ್ಠಾವಂತರಿಗೆ ಟಿಕೇಟ್ ನೀಡಬೇಕು ಎಂದು ಪತ್ರಿಕಾ ಪ್ರಕಟಣೆ ಮೂಲಕ ಬಾಸೂರ ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net