4.55 ಕೋಟಿ ವೆಚ್ಚದ ಕಾಮಗಾರಿಗೆ ಶಿವಣ್ಣನವರ ಚಾಲನೆ; ಬಿದರಗಡ್ಡಿ ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿ, ಇತರ ನಿರ್ಮಾಣ ಕಾರ್ಯ

Haveri, MLA Shivannanavar, Bidaragaddi, Road, Works,
Haveri, MLA Shivannanavar, Bidaragaddi, Road, Works,
Published on
ಹಾವೇರಿ: ಬ್ಯಾಡಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಾವೇರಿ ತಾಲೂಕಿನ ಬಿದರಗಡ್ಡಿ ಗ್ರಾಮದಲ್ಲಿ 4.55 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಸವರಾಜ ಶಿವಣ್ಣನವರ ಮಂಗಳವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕ ಶಿವಣ್ಣನವರ, ಸಂಗೂರ-ತಿಳವಳ್ಳಿ ರಸ್ತೆಯಿಂದ ಬಿದರಗಡ್ಡಿ ಗ್ರಾಮದ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಬಿದರಗಡ್ಡಿ ಗ್ರಾಮದ ಶ್ರೀ ಹೊಳಿಬಸವೇಶ್ವರ ದೇವಸ್ಥಾನದ ಮಹಾದ್ವಾರ ನಿರ್ಮಾಣಕ್ಕೆ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ 5 ಲಕ್ಷ ರೂ., ಗ್ರಾಮದ ಅಂಜುಮನ್ ಇಸ್ಲಾಂ ಕಮಿಟಿ ಮತ್ತು ಹಜರತ್ ದಾವಲ್ ಮಲಿಕ ಹಾಗೂ ರಾಜಾಬಾಕ್ಷರ್ ಕಮಿಟಿ ಅಭಿವೃದ್ಧಿ ಕಾಮಗಾರಿಗೆ ಶಾಸಕರ ಅನುದಾನದಲ್ಲಿ 5 ಲಕ್ಷ ರೂ., ಬಿದರಗಡ್ಡಿ ಗ್ರಾಮದ ಅಲ್ಪಸಂಖ್ಯಾತರ ಕಾಲನಿಯಲ್ಲಿ ಸಿ.ಸಿ ರಸ್ತೆ ಮತ್ತು ಸಿ.ಸಿ ಗಟಾರ ನಿರ್ಮಾಣ ಕಾಮಗಾರಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 10 ಲಕ್ಷ ರೂ., ಬಿದರಗಡ್ಡಿಯಿಂದ ಎಂಎ ತಿಮ್ಮಾಪುರ ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂ. ಬಿಡುಗಡೆಯಾಗಿದೆ ಎಂದರು.
ಬಿದರಗಡ್ಡಿಯಿಂದ ದಿಡಗೂರು ರಸ್ತೆ ಅಭಿವೃದ್ಧಿಗೆ 50 ಲಕ್ಷ, ಬಿದರಗಡ್ಡಿ ಗ್ರಾಮದ ಅಲ್ಪಸಂಖ್ಯಾತರ ಕಾಲನಿಯ ಸಿಸಿ ಗಟಾರ ನಿರ್ಮಾಣ ಕಾಮಗಾರಿಗೆ 25 ಲಕ್ಷ ರೂ., ಬಿದರಗಡ್ಡಿ ಗ್ರಾಮದ ಮೆಹಬೂಬ ಸುಬಾನಿ ದರ್ಗಾ ದುರಸ್ತಿ ಕಾಮಗಾರಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 10 ಲಕ್ಷ ರೂ. ಅನುದಾನ ಒದಗಿಸಲಾಗಿದೆ. ಸಂಬಂಧಿಸಿದ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಮುಖರಾದ ಸುರೇಶಗೌಡ ಪಾಟೀಲ, ವಿರೇಶ ಮತ್ತಿಹಳ್ಳಿ, ಸುರೇಶ ಮಾಳಗಿ, ಪ್ರಕಾಶಗೌಡ ಪಾಟೀಲ, ಹೇಮನಗೌಡ ಬೇವಿನಮರದ, ಹಾಸೀಮ್ ಚಾಮನಳ್ಳಿ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net