ಹುಬ್ಬಳ್ಳಿ ಹೆಸ್ಕಾಂ ಎಂಡಿ ಎಂ.ಎಲ್.ವೈಶಾಲಿ ಮಾತನಾಡಿ, ಹೆಸ್ಕಾಂನಿಂದ ಹಾವೇರಿ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಜತೆಗೆ ಸ್ಟೇಷನ್‌ಗಳ ಅಪ್‌ಗ್ರೇಡ್‌ಗೆ ಹಾಗೂ 72 ಗಂಟೆಯೊಳಗಾಗಿ ಟ್ರಾನ್ಸ್‌ಫಾರ್ಮ್‌ಗಳ ಬದಲಾವಣೆಗೆ ಕ್ರಮವಹಿಸಲಾಗಿದೆ. ಜಿಲ್ಲೆಯಲ್ಲಿ 263 ಟಿಸಿ ಬಫರ್ ದಾಸ್ತಾನಿದೆ. ಸಿನಿಯಾರಿಟಿ ಲಿಸ್ಟ್ ಅನುಸಾರ ವಿದ್ಯುತ್ ಸಂಪರ್ಕಕ್ಕೆ ಕ್ರಮವಹಿಸಲಾಗಿದೆ. 560 ಲೈನ್‌ಮನ್‌ಗಳ ಆಯ್ಕೆಯಾಗಿದ್ದು, ಮೇ ಅಂತ್ಯದೊಳಗೆ ಪ್ರಕಟಣೆ ಮಾಡಲಾಗುವುದು. ಬೊಮ್ಮನಹಳ್ಳಿ, ಬಾಳಂಬೀಡ, ಬೆಳಗಾಲಪೇಟೆ ಸ್ಟೇಷನ್ ಅಪ್‌ಗ್ರೇಡ್ ಆದರೆ ಆಭಾಗದ ಜನರಿಗೆ ಏಳು ತಾಸು ವಿದ್ಯತ್ ಸಿಗಲಿದೆ ಎಂದರು.