ಮರೋಳ ಶಾಲೆ ತಗಡು, ಕಬ್ಬಿಣದ ಪಟ್ಟಿ ಕಳವು; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ, ಡಿಸಿಗೆ ಮನವಿ

Haveri, Marola, Govt, School, Theft, DC, manavi,
Haveri, Marola, Govt, School, Theft, DC, manavi,
Published on
ಹಾವೇರಿ: ತಾಲೂಕಿನ ಮರೋಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 4.80 ಲಕ್ಷ ರೂ. ಮೌಲ್ಯದ ಮೇಲ್ಛಾವಣಿಯ ತಗಡುಗಳು ಹಾಗೂ ಅದಕ್ಕೆ ಹಾಕಿದ ಕಬ್ಬಿಣದ ಪಟ್ಟಿಗಳನ್ನು ಖಾಸಗಿ ವ್ಯಕ್ತಿಗಳು ಕಳವು ಮಾಡಿದ್ದು, ಈ ಕೂಡಲೇ ಶಾಲೆಯ ಸಾಮಗ್ರಿಗಳನ್ನು ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಡಿಸಿ ಕಚೇರಿಯಲ್ಲಿ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ ಮಾತನಾಡಿ, ಮರೋಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 4,80,000 ರೂ. ಮೌಲ್ಯದ ಸಾಮಗ್ರಿಗಳನ್ನು ಖಾಸಗಿ ವ್ಯಕ್ತಿಗಳು ತೆಗೆದುಕೊಂಡು ಹೋಗಿದ್ದಾರೆ. ಈ ಕುರಿತು ಕಳೆದ ಹತ್ತು ದಿನಗಳಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಡಿಡಿಪಿಐ ಅವರ ಗಮನಕ್ಕೆ ತರಲಾಗಿದೆ. ಗುತ್ತಲ ಪೊಲೀಸ್ ಠಾಣೆಗೂ ತಿಳಿಸಲಾಗಿದೆ. ಹಾವೇರಿ ತಹಸೀಲ್ದಾರ್ ಅವರಿಗೂ ಮನವಿ ಸಲ್ಲಿಸಲಾಗಿದೆ. ಆದರೆ, ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಈ ನಿಟ್ಟಿನಲ್ಲಿ ಗ್ರಾಮಸ್ಥರೆಲ್ಲ ಸೇರಿ ಶಾಲೆಯ ಎದುರು ಪ್ರತಿಭಟಿಸಿ, ಡಿಸಿ ಅವರಿಗೆ ಮನವಿ ಸಲ್ಲಿಸುತ್ತಿದ್ದೇವೆ. ಡಿಸಿ ಅವರು ಮಧ್ಯ ಪ್ರವೇಶಿಸಿ, ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರಾದ ಮೃತ್ಯುಂಜಯ ಮಾಗಡಿ, ಮನೋಜ ದೇವಸೂರ, ಗಂಗಪ್ಪ ಅಂಬಿಗೇರ, ನಾಗಪ್ಪ ಸಾದರ, ಸೋಮರೆಡ್ಡಿ ಮಾಗಡಿ, ನಿಂಗರೆಡ್ಡಿ ಹಾದಿಮನಿ, ಲೋಕೇಶ ಕುಬಸದ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net