ಜಿಎಚ್ ಕಾಲೇಜ್‌ನಲ್ಲಿ ಉದ್ಯೋಗ ಮೇಳ ಇಂದು

Haveri, KLE, GH College, Udyoga Mela, Job Fare,
Haveri, KLE, GH College, Udyoga Mela, Job Fare,
Published on
ಹಾವೇರಿ: ಹುಬ್ಬಳ್ಳಿಯ ಚೇತನ ಬಿಸಿನೆಸ್ ಸ್ಕೂಲ್ ಹಾಗೂ ಗುದ್ಲೆಪ್ಪ ಹಳ್ಳಿಕೇರಿ (ಜಿಎಚ್) ಕಾಲೇಜ್ ಸಹಯೋಗದಲ್ಲಿ ನಗರದ ಜಿಎಚ್ ಕಾಲೇಜ್ ಆವರಣದಲ್ಲಿ 9ರಂದು ಬೆಳಗ್ಗೆ 9.30ಕ್ಕೆ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಹಾವೇರಿ ಜಿಲ್ಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ.
ಕೆ.ಎಲ್.ಇ. ಸೊಸೈಟಿ ನಿರ್ದೇಶಕ ಎಂ.ಸಿ.ಕೊಳ್ಳಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಡಾ.ವಿ.ಎಂ.ಕೊರವಿ ಹಾಗೂ ಚೇತನ ಬಿಸಿನೆಸ್ ಸ್ಕೂಲ್ ನಿರ್ದೇಶಕ ಅರುಂಣ ರಜಪೂತ, ಇತರರು ಭಾಗವಹಿಸುವರು.
ಮೆಡ್ ಪ್ಲಸ್ ಫಾರ್ಮಾ, ಕೊರವಿ ಡೆವಲಪರ್ಸ್, ಡಿಜಿಟಲ್ ಸೊಲ್ಯೂಶನ್ಸ್, ಮುತ್ತೂಟ್ ಫೈನಾನ್ಸ್, ಕೋಟಿ ಸ್ಟೀಲ್, ಸೇರಿದಂತೆ ವಿವಿಧ ಸಂಸ್ಥೆಗಳು, ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ. ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆ ಮೂಲಕ ಸಂಸ್ಥೆ ಕೋರಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net