ಒಮ್ಮೆ ಮಾನವ ಅನುಭವದ ಪ್ರತಿಬಿಂಬವಾಗಿ ಪರಿಗಣಿಸಲ್ಪಟ್ಟ ಸಾಹಿತ್ಯವು ಈಗ ಪ್ರಬಲ ಪ್ರಚಾರಗಳನ್ನ ಪ್ರಶ್ನಿಸುವ ಮತ್ತು ವ್ಯಕ್ತಿತ್ವ, ಲಿಂಗ, ಉಪನಿವೇಶೋತ್ತರ ಚಿಂತನೆ, ಪರಿಸರ ಸಮಸ್ಯೆಗಳು ಮತ್ತು ಸಾಮಾಜಿಕ ನ್ಯಾಯ ಮುಂತಾದ ಸಮಕಾಲೀನ ವಿಚಾರಗಳನ್ನು ಚರ್ಚಿಸುವ ಶಕ್ತಿಶಾಲಿ ಸಾಧನವಾಗಿ ಪರಿಣಮಿಸಿದೆ. ಅದೇ ರೀತಿ, ಸಾಂಸ್ಕೃತಿಕ ಅಧ್ಯಯನಗಳು ಮಾಧ್ಯಮ, ಜನಪ್ರಿಯ ಸಂಸ್ಕೃತಿ ಮತ್ತು ದೈನಂದಿನ ಜೀವನದ ಅಭ್ಯಾಸಗಳನ್ನು ಒಳಗೊಂಡಂತೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು, ಇಂದಿನ ಕಾಲಘಟ್ಟದಲ್ಲಿ ಹೆಚ್ಚು ಪ್ರಸ್ತುತವಾಗಿವೆ ಎಂದರು.