ಜಿಲ್ಲಾ ಕಸಾಪ ಅಧ್ಯಕ್ಷ ಎಚ್.ಬಿ.ಲಿಂಗಯ್ಯ ಮಾತನಾಡಿ, ಆಧುನಿಕ ಮೈಸೂರು ನಿರ್ಮಾಪಕರಾದ ಇವರು, ಮೈಸೂರು ವಿ.ವಿ., ಬಾಲಕಿಯರಿಗಾಗಿ ಶಾಲೆ, ಗಂಧದ ಎಣ್ಣೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ, ಕಾಗದ ಕಾರ್ಖಾನೆ, ಸಕ್ಕರೆ, ರಸಗೊಬ್ಬರ, ಸಾಬೂನು, ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗಳನ್ನು ಸ್ಥಾಪಿಸಿ, ಯುವ ಜನರಿಗೆ ಬೆಳಕಾದರು. ಕನ್ನಡ ಸಾಹಿತ್ಯ ಪರಿಷತ್ತು ಅವರ ಕನಸಿನ ಕೂಸಾಗಿತ್ತು ಎಂದರು.