

ನಾವು ಸಾಲ ಮಾಡಿ ಮನೆ ಕಟ್ಟಿಸುತ್ತಿದ್ದೇವೆ. ಅರ್ಧ ಕಟ್ಟಿಸಿದ ಗೋಡೆ ಬೀಳಿಸಿ ಈ ಜಾಗ ಬೇಕು ಎನ್ನುತ್ತಿದ್ದಾರೆ. ಅಪ್ಪನ ಜತೆಗೆ ಜಗಳ ತೆಗೆದಿದ್ದರು. ಬಿಡಿಸಲು ಹೋದಾಗ ಗಂಗಾಧರ ನನಗೆ ಚಾಕು ಹಾಕಿದ್ದಾನೆ. ಪದೇಪದೆ ಜಗಳದಿಂದ ಬೇಸತ್ತು ಹೋಗಿದೆ. ಇದನ್ನು ಇಲ್ಲಿಗೆ ನಿಲ್ಲಿಸಬಾರದು. ನಮಗೆ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ಕಾನೂನು ಬಗ್ಗೆ ಗೌರವ ಕಡಿಮೆ ಆಗುತ್ತದೆ.