ಕನವಳ್ಳಿ ಗ್ರಾಪಂ ಹಿಂದಿನ ಪಿಡಿಓಗಳಾದ ನಾಗರಾಜ ಮಣ್ಣವಡ್ಡರ, ಪ್ರದೀಪ ಮುಳ್ಳೂರು, ಅಲ್ಲಾಭಕ್ಷ ವಡವಿ, ಈ ಹಿಂದಿನ ತಾಂತ್ರಿಕ ಸಹಾಯಕರಾದ ಸಂತೋಷ ಸಿ.,ರೇಣುಕಾ ಕೊಪ್ಪದ ಹಾಗೂ ಗ್ರಾಪಂ ಈ ಹಿಂದಿನ ಅಧ್ಯಕ್ಷರಾದ ನೀಲವ್ವ ಮುದಕಣ್ಣನವರ, ಕವಿತಾ ಎರಿಮನಿ, ಅಬ್ದುಲ್ ಖಾದರ ಮೀರಸಾಬ್ ಗಡ್ಡದ ಅವರಿಗೆ ಒಟ್ಟು 6,97,447 ರೂ. ದಂಢ ವಿಧಿಸಿ ಆದೇಶಿಸಲಾಗಿದೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಜಯ. ಈ ಕೂಡಲೇ ಸರ್ಕಾರದ ಅನುದಾನ ದುರುಪಯೋಗ ಪಡಿಸಿಕೊಂಡ ಪಿಡಿಓ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.