ಕನವಳ್ಳಿಗೆ ಶಾಸಕ ರುದ್ರಪ್ಪ, ಶಿವಣ್ಣನವರ ಭೇಟಿ, ಸಾಂತ್ವನ

fire incident
fire incident
Published on
ಹಾವೇರಿ: ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 12 ಎಮ್ಮೆಗಳು ಸಜೀವ ದಹನವಾದ ಸ್ಥಳಕ್ಕೆ ಶಾಸಕರಾದ ರುದ್ರಪ್ಪ ಲಮಾಣಿ ಹಾಗೂ ಬಸವರಾಜ ಶಿವಣ್ಣನವರ ಶನಿವಾರ ಭೇಟಿ ನೀಡಿ, ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಗ್ರಾಮದ ಪರಮೇಶ್ವರಪ್ಪ ಜಾಡರ ಎಂಬುವರು ಹೊಲದಲ್ಲಿ ನಿರ್ಮಿಸಿದ್ದ ದನದ ಕೊಟ್ಟಿಗೆ ಹಾಗೂ ಬಣವೆಗಳಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು 12 ಎಮ್ಮೆಗಳು ಮೃತಪಟ್ಟಿದ್ದವು. ಇದರಿಂದ ಲಕ್ಷಾಂತರ ರೂ.ನಷ್ಟ ಅನುಭವಿಸಿದ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಟುಂಬದವರಿಗೆ ಶಾಸಕರು ಸಾಂತ್ವನ ಹೇಳಿದರು.
ವೈಯಕ್ತಿಕ ಪರಿಹಾರ :
ಶಾಸಕ ರುದ್ರಪ್ಪ ಲಮಾಣಿ ಎಮ್ಮೆಗಳನ್ನು ಕಳೆದುಕೊಂಡ ಮಾಲೀಕರಿಗೆ ವೈಯಕ್ತಿಕವಾಗಿ 1 ಲಕ್ಷ ರೂ. ಹಾಗೂ ಬಸವರಾಜ ಶಿವಣ್ಣನವರ 25,000 ರೂ. ಆರ್ಥಿಕ ಸಹಾಯ ಮಾಡಿದರು. ಸರ್ಕಾರದಿಂದ ಹೆಚ್ಚಿನ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಸೂಕ್ತ ಪರಿಹಾರಕ್ಕೆ ಬೊಮ್ಮಾಯಿ ಆಗ್ರಹ
ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿದ್ದ ಕನವಳ್ಳಿಯ ಪರಮೇಶಪ್ಪ ಜಾಡರ ಕುಟುಂಬ ಎಮ್ಮೆಗಳ ಆಕಸ್ಮಿಕ ಸಾವಿನಿಂದ ಕಂಗಾಲಾಗಿದ್ದಾರೆ. ಸಂಕಷ್ಟದ ಸ್ಥಿತಿಯಲ್ಲಿರುವ ಆ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net