ಹಾವೇರಿ; ಜಿಲ್ಲೆಯಲ್ಲಿ ಶೇ.95ರಷ್ಟು ಜೆಜೆಎಂ ಟ್ಯಾಪ್ ಸಂಪರ್ಕ; ಜಲಶಕ್ತಿ ಸಚಿವಾಲಯದ ಸಭೆಯಲ್ಲಿ ಡಿಸಿ ದಾನಮ್ಮನವರ ಮಾಹಿತಿ

Haveri, JJM, DDWS, Secretory, DC Meeting,
Haveri, JJM, DDWS, Secretory, DC Meeting,
Published on
ಹಾವೇರಿ: ಕೇಂದ್ರ ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (ಡಿಡಿಡಬ್ಲೂೃಎಸ್) ಕಾರ್ಯದರ್ಶಿ ಅಶೋಕ ಮೀನಾ ಅಧ್ಯಕ್ಷತೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಲ ಜೀವನ ಮಿಷನ್ (ಜೆಜೆಎಂ) 2.0 ಜಾರಿ ಕುರಿತ ವಿಡಿಯೋ ಸಂವಾದದಲ್ಲಿ ಹಾವೇರಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಪಾಲ್ಗೊಂಡು ಜಿಲ್ಲೆಯಲ್ಲಿ ಜೆಜೆಎಂ ಯೋಜನೆಯಡಿ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು.
ಜಿಲ್ಲೆಯಲ್ಲಿ ಶೇ.95.36ರಷ್ಟು ಕ್ರಿಯಾತ್ಮಕ ಗೃಹ ಬಳಕೆಯ ಟ್ಯಾಪ್ ಸಂಪರ್ಕ ವ್ಯಾಪ್ತಿಯನ್ನು ಸಾಧಿಸಲಾಗಿದೆ. ವಿನ್ಯಾಸ, ನಿರ್ಮಾಣ, ನಿರ್ವಹಣೆ, ವರ್ಗಾವಣೆ ಮಾದರಿಯ ಅಡಿಯಲ್ಲಿ ದೊಡ್ಡ ಬಹುಗ್ರಾಮ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವತ್ರಿಕ ಕಾರ್ಯನಿರ್ವಹಣೆ ಮತ್ತು ನಿರ್ವಹಣೆ ನೀತಿಗಳ ಅಳವಡಿಕೆ, ನೀರು ಸರಬರಾಜು ಸ್ವತ್ತುಗಳ ಜಿಯೋ ಟ್ಯಾಗಿಂಗ್, ಸುಜಲ ಗಾಂವ್ ಆಧಾರಿತ ಆಸ್ತಿಗಳ ನಿರ್ವಹಣೆ, ಪಾರದರ್ಶಕ ನೀರಿನ ಗುಣಮಟ್ಟದ ಮೇಲ್ವಿಚಾರಣೆಗಾಗಿ ‘ಜೀವ ಜಲ ಮೊಬೈಲ್ ಅಪ್ಲಿಕೇಶನ್’ ಮತ್ತು ಜಿಲ್ಲೆಯ ಆರು ಗ್ರಾಮಗಳನ್ನು 24/7 ನೀರು ಸರಬರಾಜು ಗ್ರಾಮಗಳಾಗಿ ಘೋಷಿಸಲಾಗುವುದು. ನೀರಿನ ಬಳಕೆ ತಗ್ಗಿಸಿ, ಪಂಪಿಂಗ್ ಸಮಯ ತಗ್ಗಿಸುವ ಆವಿಷ್ಕಾರಗಳನ್ನು ಕೈಗೊಳ್ಳಲಾಗಿದೆ ಎಂದು ಡಿಸಿ ದಾನಮ್ಮನವರ ವಿವರಿಸಿದರು.
ಸಭೆಯಲ್ಲಿ ಜಿಪಂ ಸಿಇಒ ದಲ್ಜೀತಕುಮಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಮಾಲತೇಶ, ಇತರ, ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net