ಹಿರೇಬಿದರಿ ಭತ್ತ ಬೆಳೆಹಾನಿ, ಸರ್ಕಾರದಿಂದ ಪರಿಹಾರ ಕೊಡಿ; ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಆಗ್ರಹ

Haveri, JDS, Gowdashivannanavar, Hirebidari, Paddy Loss,Haveri, JDS, Gowdashivannanavar, Hirebidari, Paddy Loss,
Haveri, JDS, Gowdashivannanavar, Hirebidari, Paddy Loss,Haveri, JDS, Gowdashivannanavar, Hirebidari, Paddy Loss,
Published on
ರಾಣೆಬೆನ್ನೂರ: ಸತತವಾಗಿ ಮೂರು ದಿನಗಳಿಂದ ಸುರಿದ ಭಾರೀ ಮಳೆಗೆ ಹಾಗೂ ಆಲಿಕಲ್ಲು ಮಳೆಗೆ ತಾಲೂಕಿನ ಹಿರೇಬಿದರಿ ಗ್ರಾಮದ ಸಾವಿರಾರು ಎಕರೆ ಭತ್ತದ ಫಸಲು ಹಾನಿಗೀಡಾಗಿದ್ದು, ಕೂಡಲೇ ರಾಜ್ಯ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ದೊರಕಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಆಗ್ರಹಿಸಿದ್ದಾರೆ.
ಗುರುವಾರ ರಾತ್ರಿ ಹಿರೇಬಿದರಿ ಕೋಣನತಂಬಗಿ ಉದಗಟ್ಟಿ ಬಳಿ ಬಿರುಸಿನ ಸುರಿದ ಆಲಿಕಲ್ಲು ಮಳೆ ಸುರಿದಿದೆ. ಇದರಿಂದ ಈ ಗ್ರಾಮಗಳ ಸುತ್ತಮುತ್ತಲಿನ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಭತ್ತದ ಬೆಳೆ ಹಾನಿಗೀಡಾಗಿದೆ. ಭತ್ತದ ಕಾಳುಗಳು ಮಣ್ಣುಪಾಲಾಗಿವೆ. ರೈತರು ಒಂದು ಎಕರೆಗೆ 20ರಿಂದ 30 ಸಾವಿರ ರೂ. ಖರ್ಚು ಮಾಡಿ ಬೆಳೆದ ಬೆಳೆ ಹಾಳಾಗಿದೆ. ಈ ಬಾರಿ ಉತ್ತಮ ಫಸಲು ನಿರೀಕ್ಷೆಯಲ್ಲಿದ್ದ ರೈತರಿಗೆ ಭರಸಿಡಿಲು ಬಡಿದಂತಾಗಿದೆ. ಈ ಕೂಡಲೇ ರಾಣೆಬೆನ್ನೂರ ಶಾಸಕ ಪ್ರಕಾಶ ಕೋಳಿವಾಡ ಅವರು ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಬೇಕು. ಎಕರೆಗೆ ಒಂದು ಲಕ್ಷ ರೂ. ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದರು.
ಶನಿವಾರ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಗಮಿಸಿದ್ದ ತಹಸೀಲ್ದಾರ್ ಭಗವಾನ್ ಸ್ಪಂದಿಸಿದ್ದಾರೆ. ಎರಡು ದಿನದಲ್ಲಿ ಜಿಪಿಎಸ್ ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಗೌಡಶಿವಣ್ಣನವರ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net