ಸಹಾಯಕ ಕುಲಸಚಿವರ ಹುದ್ದೆಗೆ 2023ರಲ್ಲಿ ಶಹಜಹಾನ್ ಮುದಕವಿ ನಕಲಿ ದಾಖಲೆ ಸಲ್ಲಿಸಿ ನೌಕರಿ ಪಡೆದಿದ್ದಾರೆ ಎಂದು ವಿವಿಯ ಸಿಂಡಿಕೇಟ್ ಸದಸ್ಯರ ದೂರಿನ ಹಿನ್ನೆಲೆಯಲ್ಲಿ ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ ಫೆ.19ರಂದು ಜಾನಪದ ವಿವಿಗೆ ಆಗಮಿಸಿ ವಿಚಾರಣೆ ನಡೆಸಲಿದ್ದಾರೆ. ಈ ಕುರಿತು ಜಾನಪದ ವಿವಿಯ ಸಿಂಡಿಕೇಟ್ ಸದಸ್ಯರಾದ ಡಾ.ಬಿ.ಎಂ.ಪುಟ್ಟಯ್ಯ, ಗೋರೆವಾಲೆ ಚಂದ್ರಶೇಖರ, ಡಾ.ಜ್ಯೋತಿಲಕ್ಷ್ಮೀ ಡಿ.ಪಿ., ಡಾ.ಸಹನಾ ಪಿಂಜಾರ್, ರಾಮಪ್ಪ ಲಮಾಣಿ ಮತ್ತು ಮೋಹನಕುಮಾರ 2025ರ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿಯವರಿಗೆ ಸಲ್ಲಿಸಿದ ದೂರಿನ ಮೇರೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈ ಕುರಿತು ವಿಚಾರಣೆಗೆ ಸೂಚಿಸಿದ್ದಾರೆ. ಸರ್ಕಾರದ ಪ್ರಭಾವಿ ಸಚಿವರೊಬ್ಬರ ಹಸ್ತಕ್ಷೇಪದಿಂದ ತನಿಖೆ ವಿಳಂಭವಾಗಿದೆ. ಕೂಡಲೇ ಸರ್ಕಾರ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒಕ್ಕೂಟದ ಉಪಾಧ್ಯಕ್ಷ ಡಾ.ಎಸ್.ನಾಗರಾಜ ಒತ್ತಾಯಿಸಿದರು.