ಯುವ ಸಮೂಹದಿಂದಲೇ ಧರ್ಮ ಉಳಿಯಬೇಕಿದೆ; ಸಿದ್ಧಚಕ್ರ ಮಹಾಮಂಡಲ ಮಹೋತ್ಸವದಲ್ಲಿ ಹುಕ್ಕೇರಿಮಠ ಶ್ರೀಗಳ ಅಭಿಪ್ರಾಯ

Siddachakra Mahotsava
Siddachakra Mahotsava
Published on
ಹಾವೇರಿ: ಯುವಕರು ಧರ್ಮದತ್ತ ಮುಖ ಮಾಡಿದಾಗ ಮಾತ್ರ ಧರ್ಮ ಉಳಿಯಲು ಸಾಧ್ಯ. ಯುವಜನತೆ ಧಾರ್ಮಿಕತೆಯತ್ತ ಆಸಕ್ತಿ ತೋರಬೇಕು. ದೇಶದ ಘನತೆ ಎತ್ತಿ ಹಿಡಿಯಬೇಕು ಎಂದು ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ರಜನಿ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವದ ಸೋಮವಾರದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು. ದೇಶದ ಜನಸಂಖ್ಯೆಯಲ್ಲಿ ಶೇ.70ರಷ್ಟು ಯುವಜನ ಇದ್ದಾರೆ. ಇಡೀ ಜಗತ್ತನ್ನೇ ನಡುಗಿಸುವ ಶಕ್ತಿ ಭಾರತಕ್ಕಿದೆ. ಯುವಜನತೆ ವ್ಯಸನಗಳಿಗೆ ದಾಸರಾಗದೇ, ವ್ಯಸನ ಮುಕ್ತರಾಗಿ ದೇಶಕ್ಕೆ ಹೊಸ ಶಕ್ತಿಯಾಗಿ ಹೊರಹೊಮ್ಮಬೇಕು ಎಂದು ಸಲಹೆ ನೀಡಿದರು.
ವಿದೇಶಿಗರು ನಮ್ಮ ಸಂಸ್ಕೃತಿಗೆ ಮಾರು ಹೋಗಿದ್ದಾರೆ. ಆದರೆ, ಇಂದಿನ ಜನತೆ ನಮ್ಮ ಸಂಸ್ಕೃತಿ ಮರೆತು ವಿದೇಶಿ ಸಂಸ್ಕೃತಿ ಅಳವಡಿಸಿಕೊಳ್ಳತ್ತಿರುವುದು ವಿಷಾಧಕರ ಸಂಗತಿಯಾಗಿದೆ. ಜಗತ್ತಿನ ಇತಿಹಾಸದಲ್ಲಿ ಭಾರತಕ್ಕೆ ತನ್ನದೇ ಆದ ವೈಶಿಷ್ಟೃತೆ ಇದೆ. ವಿದೇಶಿಗರು ಭಾರತದ ಸಂಸ್ಕೃತಿ, ಸಂಸ್ಕಾರ ಪರಂಪರೆ ಕಣ್ತುಂಬಿಕೊಳ್ಳಲು ಬರುತ್ತಾರೆ. ಭಾರತ ಆರ್ಥಿಕತೆ ಮೇಲೆ ನಿಂತಿಲ್ಲ, ಇಲ್ಲಿನ ಪರಂಪರೆ-ಸಂಸ್ಕೃತಿ ಹಾಗೂ ಸಂಸ್ಕಾರಗಳ ಮೇಲೆ ನಿಂತಿದೆ ಎಂದು ಹೇಳಿದರು.
ಸಾನ್ನಿ ಧ್ಯ ವಹಿಸಿದ್ದ ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ಮಾತನಾಡಿ, ದೇಶಾದ್ಯಂತ ವಿದೇಶಿ ಸಂಸ್ಕೃತಿ ಪರಿಣಾಮ ಬೀರುತ್ತಿದೆ. ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಉಳಿಸುವುದು ಅನಿವಾರ್ಯವಾಗಿದೆ. ನಮ್ಮ ಶ್ರೀಮಂತ ಪರಂಪರೆ ಕುರಿತು ಹಿರಿಯರು ಇಂದಿನ ಪೀಳಿಗೆಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಮೂಡುಬಿದರೆ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಮಾತನಾಡಿ, ಯುವಕರು ಉದ್ಯೋಗ ಹುಡುಕುವ ಬದಲು ಉದ್ಯೋಗ ಕೊಡುವಂತೆ ಬೆಳೆಯಬೇಕು. ಜ್ಞಾನದಿಂದ ಜಗತ್ತಿನಲ್ಲಿ ಹೆಸರು ಮಾಡಬಹುದು ಎಂದರು.
ಹಾವೇರಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದರ್ಶನ ಲಮಾಣಿ ಜೈನ ಮುನಿಗಳ ಫೋಟೋ ಅನಾವರಣಗೊಳಿಸಿದರು. ಕರ್ನಾಟಕ ಜೈನ್ ಅಸೋಸಿಯೇಶನ್ ಕಾರ್ಯಕಾರಿ ಮಂಡಳಿ ಸದಸ್ಯ ಎಸ್.ಎ.ವಜ್ರಕುಮಾರ ಅಧ್ಯಕ್ಷತೆ ವಹಿಸಿದ್ದರು.
ಪದ್ಮಶ್ರೀ ಮಾತಾಜಿ, ಪ್ರತಿಷ್ಠಾಚಾರ್ಯರಾದ ಮಾಣಿಕ ಶ್ರೀಪಾಲ ಚಂದಗಡೆ ಮತ್ತು ಪ್ರತಿಮಾಧಾರಿಗಳಾದ ಸಿದ್ದಗೌಡ ಪಾಟೀಲ, ಬ್ರ. ಸಾಧನಾ ದೀದಿ, ಬಾಲ ಬ್ರಹ್ಮಚಾರಿ ಮಹಾವೀರ ಭಯ್ಯಜಿ ಹಾಗೂ ಬ್ರ.ಜಯಕುಮಾರ ಭಯ್ಯಜಿ, ಜಿನೇಂದ್ರ ಬಂಗ, ಸಾಧನಾ ದೀದಿ, ಮಹೋತ್ಸವ ಸಮಿತಿ ಅಧ್ಯಕ್ಷ ಸುಭಾಸ ಪಾಟೀಲ, ಜೈನ್ ಮಿಲನ್ ನಿರ್ದೇಶಕ ವಿಮಲಕುಮಾರ ಬೋಗಾರ, ಮಂಜುನಾಥ ಉಪಾಧ್ಯೆ, ಶಿವಬಸಪ್ಪ ಹಲಗಣ್ಣನವರ, ಬ್ರಹ್ಮಕುಮಾರ ಹೊಸೂರ, ಮದನಕುಮಾರ ಜೈನ್, ದೇವೇಂದ್ರ ಹಳ್ಳಿಯವರ, ಷಣ್ಮುಖಪ್ಪ ಚೂರಿ, ನವೀನ ಜಗಶೆಟ್ಟಿ, ಪ್ರದೀಪ ಬಳಿಗಾರ, ಇತರರು ಉಪಸ್ಥಿತರಿದ್ದರು.
ಸನ್ಮಾನ:
ಕಲಾವಿದರಾದ ವಿನೋದ ಪ್ರಭಾಕರ ಹಾಗೂ ಶ್ರೇಯಸ್ ಜೈನ್ ಮತ್ತು ಐಐಟಿಯಲ್ಲಿ ಉತ್ತಮ ಸಾಧನೆ ಮಾಡಿದ ಅಭಿಷೇಕ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
"

ಸಕಲ ಜೀವರಾಶಿಗಳ ಲೇಸನ್ನೇ ಬಯಸುವ ಜೈನ ಧರ್ಮ ವಿಶ್ವ ಧರ್ಮವಾಗಿದೆ. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಜೈನ ಧರ್ಮದ ಸಾರವಾಗಿದೆ. ಅನೇಕ ಪ್ರಕಾರದ ಕಾಯಿಗಳಿವೆ. ಆದರೆ ನಾವು ತೆಂಗಿನಕಾಯಿಯನ್ನು ಮಾತ್ರ ದೇವರಿಗೆ ಅರ್ಪಿಸುತ್ತೇವೆ. ಕೊಬ್ಬರಿಯನ್ನು ಪ್ರಸಾದವಾಗಿ ಸ್ವೀಕರಿಸುತ್ತೇವೆ. ತೆಂಗನಕಾಯಿಯಲ್ಲಿ ಉತ್ತಮ ಅಂಶಗಳುಳ್ಳ ಕೊಬ್ಬರಿ ಇರುವಂತೆ, ನಾವೂ ಉತ್ತಮವಾದ ಕೆಲಸಗಳನ್ನು ಮಾಡಬೇಕು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net