ಶಿಕ್ಷಣ, ಕಾನೂನು ಕ್ಷೇತ್ರದಿಂದ ಮಹಿಳೆಯರ ರಕ್ಷಣೆ; ಇಡಾರಿ ಸಂಸ್ಥೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ನ್ಯಾಯಾಧೀಶೆ ಶೈಲಜಾ ಎಸ್.ಎಚ್.

 womens day,
womens day,
Published on
ಹಾವೇರಿ: ಮಹಿಳೆಯರು ಅನೇಕ ಸಂಕಷ್ಟಗಳನ್ನು ಎದುರಿಸುವಾಗ ಹಾವೇರಿಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಮಾರ್ಗದರ್ಶನ ಪಡೆದು ಸಮಾಜದಲ್ಲಿ ಹೊಸ ಬದುಕು ನಡೆಸುತ್ತಿರುವುದು ಅಭಿನಂದನೀಯ. ಶಿಕ್ಷಣ ಮತ್ತು ಕಾನೂನು ಮಾತ್ರ ಮಹಿಳೆಯರನ್ನು ಕಾಪಾಡಬಲ್ಲವು ಎಂದು ಡಿ.ಎಲ್.ಎಸ್.ಸಿ ನ್ಯಾಯಾಧೀಶೆ ಶೈಲಜಾ ಎಸ್.ಎಚ್. ಹೇಳಿದರು.
ಇಲ್ಲಿಯ ಶಿವಾಜಿ ನಗರದ ಮೂರನೇ ಕ್ರಾಸ್‌ನಲ್ಲಿ ಮಹಿಳಾ ಶಕ್ತಿ ಸದನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಮಹಾದೇವಿ ಕಣವಿ ಮಾತನಾಡಿ, ಅನೇಕ ಕಾನೂನಾತ್ಮಕ ರಕ್ಷಣೆಗಳು ಇದ್ದಾಗಲೂ ಎಷ್ಟೋ ಸಲ ಅವುಗಳ ಅರಿವು ಇಲ್ಲದೇ ಅನೇಕ ಮಹಿಳೆಯರು ವಿಶೇಷವಾಗಿ ಶಿಕ್ಷಿತರೂ ಕೂಡ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಎಲ್ಲ ಜ್ಞಾನಗಳ ಜತೆಗೆ ಲೋಕಜ್ಞಾನ ಇಂದಿನ ಅಗತ್ಯವಾಗಿದೆ ಎಂದರು.
ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಪರಿಮಳಾ ಜೈನ್ ಮಾತನಾಡಿ, ಎಂತಹ ಸಮಸ್ಯೆಗಳು ಬಂದಾಗಲೂ ಕೂಡ ನಮ್ಮ ಇಡಾರಿ ಸಂಸ್ಥೆಯ ಶಕ್ತಿ ಸದನ ಸಹಾಯ ಹಸ್ತ ಚಾಚುತ್ತದೆ. ಬದುಕುವ ಕೌಶಲವನ್ನು ಕಲಿಸಿಕೊಡುತ್ತದೆ ಎಂದು ಹೇಳಿದರು.
ಶಾಲಿನಿ ಕಮ್ಮಾರ, ಜುಬೇದಾ ನಾಯಕ್, ಸಾವಿತ್ರಿಬಾಯಿ ಫುಲೆ ಸಂಘದ ಅಕ್ಕಮಹಾದೇವಿ ನೀರಲಗಿ, ಕಲಾವಿದೆ ಶಶಿಕಲಾ ಅಕ್ಕಿ ಮುಂತಾದವರು ಮಾತನಾಡಿದರು. ಹಾಲಮ್ಮ, ಶೈಲಜಾ ಎ.ಎನ್., ಭಾರತಿ ಯಾವಗಲ್, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net