ಘನವೈರಾಗ್ಯ ಜಂಗಮ ಜ್ಯೋತಿ, ಯೋಗಿಗಳ ಪರಂಪರೆಯಲ್ಲಿ ಮುಂಚೂಣಿಯಲ್ಲಿರುವ ಮುರುಘೇಂದ್ರ ಶ್ರೀಗಳು ಶಿವಪಥದಲ್ಲಿ ಇದ್ದು ಲೋಕಪಥದತ್ತ ಸಾಗಿದವರು. ಉತ್ತರ ಕರ್ನಾಟಕದ ಪ್ರಸಿದ್ಧ ಸಿದ್ದಪುರುಷರು, ಜ್ಞಾನ, ಯೋಗ ಹಾಗೂ ಅದ್ಬುತ ವಾಕ್ ಸಿದ್ದಿಯಿಂದ ಲಕ್ಷಾಂತರ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿದ ಮಹಾನ್ ದಾರ್ಶನಿಕರು. ಶಿವಯೋಗಿಗಳು ಮಹಾತಪಸ್ವಿಗಳಾಗಿ, ಅಂತರ ಜ್ಞಾನಿಗಳಾಗಿ, ತ್ರಿಕಾಲ ಜ್ಞಾನಿಗಳಾಗಿ ಆದರ್ಶ ಜೇವನಗೈದು ತಮ್ಮ ಶಿವಪೂಜೆ ಅನುಷ್ಠಾನದ ಪ್ರಭಾವಮಯ ಪ್ರಕಾಶದ ಜ್ಯೋತಿಯನ್ನು ದಯಪಾಲಿಸುತ್ತ ಜೀವನ್ಮುಕ್ತಗೊಂಡರು ಎಂದರು.