ಹಾವೇರಿ: ಹೋಳಿ ಹಬ್ಬದ ತಯಾರಿ ಹಿನ್ನೆಲೆಯಲ್ಲಿ ಫೆ.10ರಂದು ಸಂಜೆ 6 ಗಂಟೆಗೆ ನಗರದ ಕಲ್ಲುಮಂಟಪ ಓಣಿಯ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಸಭೆಯಲ್ಲಿ ಹಬ್ಬದ ದಿನಾಂಕ, ಆಚರಣೆ, ಇತ್ಯಾದಿ ವಿಷಯಗಳ ಕುರಿತು ಚರ್ಚಿಸಲಾಗುವುದು. ನಗರದ ವಿವಿಧ ಸಮಾಜಗಳ ಮುಖಂಡರು, ಎಲ್ಲ ಹೋಳಿ ಸಮಿತಿಯ ಪದಾಧಿಕಾರಿಗಳು, ವ್ಯಾಪಾರಸ್ಥರು, ಎಲ್ಲ ಸಂಘ- ಸಂಸ್ಥೆಗಳ ಪಧಾಧಿಕಾರಿಗಳು, ಸಾರ್ವಜನಿಕರು ಸಭೆಗೆ ಹಾಜರಾಗಿ ಸಲಹೆ, ಸೂಚನೆಗಳನ್ನು ನೀಡುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.