

ನಕಲಿ ವೈದ್ಯರ ತಡೆಗಾಗಿ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಇತ್ತೀಚೆಗೆ ವಿಶೇಷ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗಿದೆ. ತಾಲೂಕು ವೈದ್ಯಾಧಿಕಾರಿ(ಟಿಎಚ್‌ಒ)ಗಳ ನೇತೃತ್ವದಲ್ಲಿ ನಕಲಿ ವೈದ್ಯರನ್ನು ಪತ್ತೆ ಹಚ್ಚಲಾಗುತ್ತದೆ. ನಂತರ ಆ ಕುರಿತ ವರದಿ ಆಧರಿಸಿ ಸಮಿತಿ ಮುಂದಿನ ಕ್ರಮ ಜರುಗಿಸಲು ಶಿಫಾರಸ್ಸು ಮಾಡುತ್ತದೆ. ಕ್ಲಿನಿಕ್ ಬಂದ್ ಮಾಡುವ ಜತೆಗೆ ಎಫ್‌ಐಆರ್ ದಾಖಲಿಸಿ, ದಂಡ ವಿಧಿಸುವ ಅವಕಾಶವಿದೆ.