ಹನ್ನೊಂದು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ; ಗುತ್ತಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು

Guttala POCSO Case
Guttala POCSO Case
Published on

ಪ್ರಮುಖ ಮುಖ್ಯಾಂಶಗಳು

  • ಹನ್ನೊಂದು ವರ್ಷದ ಬಾಲಕಿಗೆ ಸುಳ್ಳು ಹೇಳಿ ಪುಸಲಾಯಿಸಿ ಲೈಂಗಿಕ ಕಿರುಕುಳ
  • ಶೌಚಗೃಹಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ
  • ಗುತ್ತಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ
ಹಾವೇರಿ: ಹನ್ನೊಂದು ವರ್ಷದ ಬಾಲಕಿಗೆ ಸುಳ್ಳು ಹೇಳಿ ಪುಸಲಾಯಿಸಿ, ಶೌಚಗೃಹಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ಎಸಗಿದ ಘಟನೆ ನಡೆದಿದ್ದು, ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ಮಣಿಕಂಠ ಗೊಣ್ಣಿ ಅಲಿಯಾಸ್ ಚಕ್ರಸಾಲಿ ಎಂಬಾತ ತನ್ನದೇ ಓಣಿಯ 11 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಎಸಗಿದ್ದಾನೆ. 11 ವರ್ಷದ ಬಾಲಕಿ ಮಂಗಳವಾರ ಅಡಿಕೆ ತರಲೆಂದು ಸಮೀಪದ ಅಂಗಡಿಗೆ ತೆರಳಿದ್ದಳು. ಈ ವೇಳೆ, ಮಣಿಕಂಠ, ‘ನಿಮ್ಮ ತಂದೆ ಕರೆಯುತ್ತಿದದಾರೆ ಬಾ’ ಎಂದು ಸುಳ್ಳು ಹೇಳಿ ಪುಸಲಾಯಿಸಿ ಗೋಪಾಲ ಗೊಣ್ಣಿ ಎಂಬಾತನ ಮನೆಗೆ ಕರೆದುಕೊಂಡು ಹೋಗಿದ್ದ. ಶೌಚಗೃಹಕ್ಕೆ ಹೋಗಿ ಬಾಲಕಿಯ ಬಾಯಿ ಬಿಗಿಯಾಗಿ ಹಿಡಿದು ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಕೇಳಲು ಹೋದ ತಂದೆ ಮೇಲೆಯೇ ಹಲ್ಲೆ ಮಾಡಿದ್ದಾನೆ. ಆರೋಪಿತರ ಮೇಲೆ ಶಿಸ್ತು ಕ್ರಮ ಜರುಗಿಸಿ ಎಂದು ಬಾಲಕಿಯ ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ. ಪೊಲೀಸ್ ತನಿಖೆ ಆರಂಭಗೊಂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net