ಹಾವೇರಿ: ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕದಿಂದ ಹಾವೇರಿ ತಾಲೂಕಿನ ಹಾವನೂರ, ಗುತ್ತಲ ಹಾಗೂ ಸವಣೂರ ತಾಲೂಕಿನ ಹತ್ತಿಮತ್ತೂರು ಮಂಡಲದಲ್ಲಿ ಶನಿವಾರ ಮತದಾರರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಕುರಿತು ಜಾಗೃತಿ ಸಭೆ ಜರುಗಿತು.
ಬಿಜೆಪಿ ಹಾವೇರಿ ವಿಧಾನಸಭಾ ಕ್ಷೇತ್ರದ ಎಸ್‌ಐಆರ್ ಉಸ್ತುವಾರಿ ಪಾಲಾಕ್ಷಗೌಡ ಪಾಟೀಲ ಎಸ್‌ಐಆರ್ ಪ್ರಕ್ರಿಯೆ ಕುರಿತು ವಿವರಿಸಿದರು. ಮನೆ ಮನೆಗೆ ಭೇಟಿ ನೀಡಿ ಪರಿಷ್ಕರಣೆ ನಡೆಯುವ ಕಾರ್ಯದಲ್ಲಿ ಜನರಿಗೆ ಅಗತ್ಯ ಮಾಹಿತಿ ನೀಡುವಂತೆ ಸೂಚಿಸಿದರು.
ಬಿಜೆಪಿ ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಚಿಕ್ಕಬಿದರಿ, ಬಸವರಾಜ ಕೋಳಿವಾಡ, ಪ್ರವೀಣ ಶೆಟ್ಟಿ, ಮಾರುತಿ ಗೊರವರ, ಮಂಡಲದ ಅಧ್ಯಕ್ಷರು. ಪದಾಧಿಕಾರಿಗಳು, ಇತರರು ಉಪಸ್ಥಿತರಿದ್ದರು.