ಸ್ವಾತಂತ್ರ್ಯ ಹೋರಾಟಗಾರರ ಅಧ್ಯಯನ ಪೀಠಕ್ಕೆ ಸಿದ್ಧ; ದಾನಿಗಳು ಆಸಕ್ತಿ ತೋರಿದರೆ ಹಾವೇರಿ ವಿವಿಯಲ್ಲಿ ಆರಂಭ; ಕುಪಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಭರವಸೆ

freedom-figthers-study centre,
freedom-figthers-study centre,
Published on
ಹಾವೇರಿ: ಸ್ವಾತಂತ್ರೃ ಹೋರಾಟದಲ್ಲಿ ಹಾವೇರಿ ಜಿಲ್ಲೆ ಮುಂಚೂಣಿಯಲ್ಲಿತ್ತು. ಸ್ವಾತಂತ್ರ್ಯ ಹೋರಾಟಗಾರರ ಕುರಿತು ಹಾವೇರಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಆರಂಭಿಸಲು ಅವಕಾಶವಿದ್ದು, ಆಸಕ್ತ ದಾನಿಗಳು ಸಂಪರ್ಕಿಸಬಹುದು ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಹೇಳಿದರು.
ನಗರದ ಡಿಸಿ ಕಚೇರಿ ರಸ್ತೆಯ ಶ್ರೀ ಗಂಗಾಧರ ನಂದಿ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಅರಳಿಕಟ್ಟಿ ಪ್ರಕಾಶನದಿಂದ ಆಯೋಜಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಗುರುಶಾಂತಪ್ಪ ಜಾಬಿನ್ ಅವರ ಜನ್ಮಶತಮಾನೋತ್ಸವ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದವರ ಕುರಿತು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಪೀಠ ಆರಂಭಿಸಲು ಅವಕಾಶವಿದೆ. ಮೂಲಸೌಕರ್ಯಗಳು, ಸಿಬ್ಬಂದಿ ವೇತನ ಸೇರಿದಂತೆ ಇನ್ನಿತರ ಖರ್ಚುಗಳಿಗೆ ಸರ್ಕಾರದ ಅನುದಾನ ಬಳಸಬಹುದು. ಜತೆಗೆ ದಾನಿಗಳು ಆರ್ಥಿಕವಾಗಿ ಸಹಕಾರ ನೀಡಿದರೆ ಅಧ್ಯಯನ ಪೀಠವನ್ನು ತುರ್ತಾಗಿ ಶುರು ಮಾಡಲು ಅವಕಾಶವಿದೆ ಎಂದರು.
ದತ್ತಿ ಉಪನ್ಯಾಸ ನೀಡಿದ ಪ್ರೊ.ಪಿ.ಸಿ.ಹಿರೇಮಠ ಮಾತನಾಡಿ, ಸ್ಥಳೀಯ ನಾಯಕರ ಬಗ್ಗೆ ಚರಿತ್ರೆಯನ್ನು ಕಟ್ಟಿಕೊಡುವುದು ಸವಾಲಿನ ಕೆಲಸ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಮಾಜವನ್ನು ಕಟ್ಟುವ ಜತೆಗೆ ಬ್ರಿಟೀಷರ ನಿದ್ರೆಗೆಡಿಸುವ ಕಾರ್ಯ ಮಾಡಿದ ಗುರುಶಾಂತಪ್ಪ ಜಾಬಿನ್ ತಾವೇ ಕಲಿತ ಶಾಲೆಗೆ ಬೆಂಕಿ ಇಟ್ಟು ದಾಸ್ಯವನ್ನು ಧಿಕ್ಕರಿಸಿದವರು. ಅಂಥ ಹೋರಾಟಗಾರರ ಜನ್ಮಶತಮಾನೋತ್ಸವ ಆಚರಣೆ ನಿಜಕ್ಕೂ ಮೆಚ್ಚುವಂಥದ್ದು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಬಿ.ಹಿರೇಮಠ ಮಾತನಾಡಿದರು. ನಿವೃತ್ತ ಶಿಕ್ಷಕ ಕೆ.ಬಿ.ಬಿಕ್ಷಾವರ್ತಿಮಠ ದತ್ತಿ ದಾನಿಗಳ ಪರಿಚಯ ಮಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಬಿ. ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್.ಎನ್.ದೊಡ್ಡಗೌಡ್ರ, ಮಲ್ಲಿಕಾರ್ಜುನ ಸಾತೇನಹಳ್ಳಿ, ಶಿವಬಸಪ್ಪ ಜಾಬಿನ್, ಜಗದೀಶ ಮಹಾರಾಜಪೇಟ, ವಿವೇಕಾನಂದ ಅಂಗಡಿ, ರುದ್ರಮುನಿ ಹುಲ್ಮನಿ, ಪರಮೇಶಪ್ಪ ಮೈಲಾರ, ಅನಸೂಯಾ ಮೆಳ್ಳಳ್ಳಿ, ಈರಣ್ಣ ಬೆಳವಡಿ, ಎಸ್.ಎಂ.ಬಡಿಗೇರ, ಎಸ್.ಆರ್.ಹಿರೇಮಠ, ಇತರರು ಉಪಸ್ಥಿತರಿದ್ದರು.
ಪೃಥ್ವಿರಾಜ್ ಬೆಟಗೇರಿ ನಿರೂಪಿಸಿದರು. ಗೂಳಪ್ಪ ಅರಳಿಕಟ್ಟಿ ಸ್ವಾಗತಿಸಿದರು. ಸಿದ್ದೇಶ್ವರ ಹುಣಸಿಕಟ್ಟಿಮಠ ವಂದಿಸಿದರು.
"

ಸ್ವಾತಂತ್ರ್ಯ ಹೋರಾಟದ ಬಳಿಕವೂ ಸಾರ್ವಜನಿಕ ಜೀವನದಲ್ಲಿ ಕಾಯಕ ನಿಷ್ಠೆಯಿಂದ ಬದುಕಿದ ಗುರುಶಾಂತಪ್ಪ ಜಾಬಿನ್ ಅವರ ಆದರ್ಶಗಳು ಇಂದಿಗೂ ಮಾದರಿ. ಅವರ ಜನ್ಮಶತಮಾನೋತ್ಸವ ಆಚರಣೆ ಅಭಿನಂದನೀಯ. ಹಿರಿಯರ ನಡೆ ನುಡಿಗಳನ್ನು ಪಾಲಿಸುತ್ತ ಬಂದಿರುವ ಅವರ ಕುಟುಂಬದ ಸರ್ವರೂ ಅಭಿನಂದನಾರ್ಹರು.

"

ನಿಷ್ಕಳಂಕ ವ್ಯಕ್ತಿತ್ವದ ಮೂಲಕ ಜನಮಾನಸದಲ್ಲಿರುವ ಗುರುಶಾಂತಪ್ಪ ಜಾಬಿನ್ ಪುರಸಭೆ ಅಧ್ಯಕ್ಷರಿದ್ದಾಗ ನಮ್ಮ ಮಠದ ಆಸ್ತಿಯನ್ನು ಉಳಿಸಿಕೊಟ್ಟ ಹೆಗ್ಗಳಿಕೆ ಪಡೆದವರು. ಒಬ್ಬ ವ್ಯಕ್ತಿಯ ಸಾವಿನ ನಂತರವೂ ಉಳಿಯುವುದು ಸತ್ಕಾರ್ಯಗಳು ಮಾತ್ರ ಎಂಬುದಕ್ಕೆ ಅವರೇ ಸಾಕ್ಷಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net