ಗುರುವಿಗೆ ಶಿಷ್ಯರಿಂದ ಚಿನ್ನದುಂಗುರ ಉಡುಗೊರೆ; ತಾಲೂಕು ತಿಮ್ಮಾಪುರ ಸರ್ಕಾರಿ ಶಾಲೆಯಿಂದ ವರ್ಗಾವಣೆಯಾದ ಆರ್.ಆರ್.ಬಾರಕೇರ ಶಿಕ್ಷಕರಿಗೆ ಆತ್ಮೀಯ ಬೀಳ್ಕೊಡುಗೆ

Haveri, Govt School, Teacher, Fecilitation, With Gold Ring,
Haveri, Govt School, Teacher, Fecilitation, With Gold Ring,
Published on
ಶಿಗ್ಗಾಂವಿ: ತಾಲೂಕಿನ ತಿಮ್ಮಾಪೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ 28 ವರ್ಷ ಸೇವೆ ಸಲ್ಲಿಸಿ ನೂರುರು ಶಿಷ್ಯಂದಿರನ್ನು ನಾಡಿಗೆ ಕೊಡುಗೆಯಾಗಿ ನೀಡಿದ ಆರ್.ಆರ್.ಬಾರಕೇರ ಅವರಿಗೆ ಅವರ ಶಿಷ್ಯಂದಿರೆಲ್ಲ ಸೇರಿ ಇತ್ತೀಚೆಗೆ 10 ಗ್ರಾಂ ತೂಕದ ಚಿನ್ನದ ಉಂಗುರ ಉಡಗೊರೆ ನೀಡುವ ಮೂಲಕ ಆತ್ಮೀಯವಾಗಿ ಬೀಳ್ಕೊಟ್ಟರು.
ತಿಮ್ಮಾಪೂರ ಸರ್ಕಾರಿ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ ಮಾತನಾಡಿ, ಬಾರಕೇರ ಅವರ ಶಿಕ್ಷಣ ಪ್ರೇಮ ಎಲ್ಲರಿಗೂ ಮಾದರಿಯಾಗಿದೆ. ಅವರ ಹೆಸರು ಎಂದಿಗೂ ಜನರ ನಾಡಿಮಿಡಿತದಲ್ಲಿ ಅವಿಸ್ಮರಣೀಯವಾಗಿದೆ. ಗ್ರಾಮದ ಜನರೊಂದಿಗೆ ಒಡನಾಡಿಯಾಗಿ ಮಕ್ಕಳ ಬದುಕಿಗೆ ದಾರಿದೀಪವಾದ ಅವರ ಸೇವೆ ಮೆಚ್ಚುವಂಥದ್ದು ಎಂದು ವಿವರಿಸಿದರು.
ಜ್ಯೂನಿಯರ್ ರಾಜಕುಮಾರ ಅಶೋಕ ಬಸ್ತಿ ಮಾತನಾಡಿ, ಒಬ್ಬ ಗುರು ದೀಪದಂತೆ ಮೊದಲು ಉರಿದು ನಂತರ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿ ಅವರ ಬದುಕನ್ನು ಬೆಳಗುತ್ತಾರೆ. ಅದೇ ರೀತಿ ಬಾರಕೇರ ಗುರುಗಳು ಅನೇಕ ಮಕ್ಕಳ ಜೀವನ ಬೆಳಗಿದ್ದಾರೆ ಎಂದರು.
ಧಾರವಾಡ ನಗರ ಪಾಲಿಕೆಯ ಮಾಜಿ ಮೇಯರ್ ದಾನಪ್ಪ ಕಬ್ಬೇರ ಮಾತನಾಡಿ, ಬದುಕಿನ ಏಳು ಬಿಳುಗಳ ಮಧ್ಯೆಯೂ ಅದ್ಬುತವಾದ ಪ್ರತಿಭೆಗಳನ್ನು ಗುರುತಿಸಿ ಅವರ ಬದುಕನ್ನ ಕಟ್ಟಿಕೊಡುವ ಗುರುವಿನ ಕಾರ್ಯ ದೊಡ್ಡದು ಎಂದು ಹೇಳಿದರು.
ತಿಮ್ಮಾಪುರ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರು ಹೆಬ್ಬಾಳ ಮಾತನಾಡಿ, ಅನುಭದ ಗಣಿ ಚತುರತೆ. ಸರಳ ಮಾತುಗಳ ಮೂಲಕ ಜನರ ಮನ ಗೆದ್ದಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಉತ್ತಮವಾಗಿ ನಮ್ಮ ಶಾಲೆ ರೂಪಿಸಿದ್ದಾರೆ. ಹಲವು ಪ್ರಶಸ್ತಿ ಬರಲು ಕಾರಣೀಭೂತರಾಗಿದ್ದಾರೆ ಎಂದರು.
ಸಮಾರಂಭದಲ್ಲಿ ಅರುಣ ಹುಡೇದಗೌಡ್ರು, ಶ್ರೀನಿವಾಸ, ಬಿ.ವೈ. ಉಪ್ಪಾರ, ವಿ.ಎಸ್.ಪಾಟೀಲ, ಚಂದ್ರಕಾಂತ ಗಾರವಾಡ, ಎಂ.ಯು.ಕರ್ಜಗಿ, ಮಹಾದೇವ ಸುಣಗಾರ, ಶಿವಾನಂದ ಭಜಂತ್ರಿ, ಆನಂದ ಕ್ಯಾರಕಟ್ಟಿ, ಗಂಗಪ್ಪ ತಾಂದೋಳ್ಕರ, ಶಿವಾಜಿ ತಮ್ಮಣ್ಣವರ, ಗಣಪತಿ ಗುಣೋಜಿ, ಬೀಬಿಜಾನ ಹುಲಗೂರ, ಬಸೀರಸಾಬ ಹುಲಗೂರ, ಶಶಿಕುಮಾರ ಹುಲಸೋಗಿ, ಎಸ್‌ಡಿಎಂಸಿ ಉಪಾಧ್ಯಕ್ಷ ಲಕ್ಷ್ಮೀ ಮಾಡಿಕನವರ, ಸದಸ್ಯರಾದ ಸಯ್ಯದಸಾಬ ಹುಲಗೂರ, ಸಂಜೀವ ಕನಕಪ್ಪನವರ, ಶರಣಯ್ಯ ಹಿರೇಮಠ, ಪರಶುರಾಮ ಲೋಖಂಡೆ, ಕಲಾಂದರ ಹುಲಗೂರ, ಸುಂಕಪ್ಪ ಕ್ಯಾರಕಟ್ಟಿ, ಖಾಸೀಂಸಾಬ ಹುಲಗೂರ, ಪಿರೋಜಿ ಕೂಬಿಹಾಳ, ಮಂಜುನಾಥ ಬಡಿಗೇರ, ಜಂಗ್ಲಿಸಾಬ, ನೂರಾರು ಶಿಷ್ಯಂದಿರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
"

ಈ ಶಾಲೆಯಲ್ಲಿ 28 ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ನೀಡಿದ ತಿಮ್ಮಾಪುರ ಜನರ ಪ್ರೀತಿಗೆ ನಾನು ಚಿರಋಣಿ. ಒಂದು ವರ್ಷ ನಿವೃತ್ತಿಗೆ ಬಾಕಿ ಇದ್ದು ಧಾರವಾಡಕ್ಕೆ ವರ್ಗವಾಗಿದೆ. ನೀವು ನನಗೆ ತೋರಿದ ಪ್ರೀತಿ ಸಹಕಾರ ಗೌರವಕ್ಕೆ ನಾನು ತಲೆ ಬಾಗುತ್ತೇನೆ. ನಿಮ್ಮ ಈ ಅದ್ದೂರಿ ಬೀಳ್ಕೊಡುವ ಸಮಾರಂಭ ನಾನು ಉಸಿರು ಇರುವವರೆಗೆ ನೆನಪಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net