ನಾನು, ನನ್ನ ಐವರು ಸ್ನೇಹಿತರು ಸೇರಿದಂತೆ ಹಲವು ಜನರಿಗೆ ನೌಕರಿ ಕೊಡಿಸುವುದಾಗಿ ನಂಬಿಸಿ ವಾಸೀಂ ಚೌಧರಿ 95,50,000 ರೂ. ಪಡೆದು ವಂಚಿಸಿದ್ದಾನೆ ಎಂದು ಜನವರಿ 21, 2026ರಲ್ಲಿ ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ವಾಸೀಂ, ಸಮೀನಾ ಶೇಖ್, ರವಿ ಬಾರ್ಕಿ ಹಾಗೂ ಅನೀಶ್ ತಹಸೀಲ್ದಾರ್ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಸಮಗ್ರವಾಗಿ ತನಿಖೆ ನಡೆಸಿ, ನಮಗೆ ನ್ಯಾಯ ಕೊಡಿಸಬೇಕು ಎಂದು ಕರಬಸಪ್ಪ ಎಲಿ ಹಾಗೂ ನೊಂದ ಕುಟುಂಬಗಳ ಮಹಿಳೆಯರು ಒತ್ತಾಯಿಸಿದರು.